ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತ್ಯತೀತತೆ ಯುರೋಪ್‌ ಪರಿಕಲ್ಪನೆ, ಭಾರತದ್ದಲ್ಲ: ರಾಜ್ಯಪಾಲ ಆರ್‌.ಎನ್‌. ರವಿ

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹೇಳಿಕೆ
Published : 23 ಸೆಪ್ಟೆಂಬರ್ 2024, 16:35 IST
Last Updated : 23 ಸೆಪ್ಟೆಂಬರ್ 2024, 16:35 IST
ಫಾಲೋ ಮಾಡಿ
Comments

ಚೆನ್ನೈ: ‘ಜಾತ್ಯತೀತತೆ ಎಂಬುದು ಯುರೋಪ್‌ ಪರಿಕಲ್ಪನೆಯಾಗಿದ್ದು, ಭಾರತಕ್ಕೆ ವಿದೇಶದಿಂದಲೇ ಬಂದಿದೆ’ ಎಂದು ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹೇಳಿದ್ದಾರೆ.

’1975ರ ತುರ್ತು ಪರಿಸ್ಥಿತಿ ವೇಳೆ ಕೆಲವೊಂದು ವರ್ಗದವರನ್ನು ಸಂತುಷ್ಟಗೊಳಿಸಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ ಪೀಠಿಕೆಯಲ್ಲಿ ಈ ಪದವನ್ನು ಸೇರ್ಪಡೆಗೊಳಿಸಿದರು’ ಎಂದು ತಿಳಿಸಿದರು.

ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತ್ಯತೀತತೆ ಪದದ ತಪ್ಪು ವ್ಯಾಖ್ಯಾನ ಮಾಡುವ ಮೂಲಕ ದೇಶದಲ್ಲಿ ವಿರೋಧಪಕ್ಷಗಳು ಸಾಕಷ್ಟು ಅಕ್ರಮ ನಡೆಸಿದವು’ ಎಂದು ಆರೋಪಿಸಿದರು.

ಜಾತ್ಯತೀತತೆ ಎಂಬುದು ಯುರೋಪ್‌ನ ಪರಿಕಲ್ಪನೆ. ಭಾರತಕ್ಕೆ ಅಂತಹ ಪರಿಕಲ್ಪನೆಯ ಅಗತ್ಯವೇ ಇಲ್ಲ. ಚರ್ಚ್‌ ಹಾಗೂ ರಾಜರ ನಡುವೆ ಸಂಘರ್ಷ ಉಂಟಾದ ವೇಳೆ ಯುರೋ‍ಪ್‌ನಲ್ಲಿ ಈ ಪರಿಕಲ್ಪನೆ ಹುಟ್ಟಿತ್ತು. ಭಾರತವು ಯಾವಾಗ ಧರ್ಮದಿಂದ ಆಚೆಗಿದೆ..? ಭಾರತಕ್ಕೆ ಜಾತ್ಯತೀತತೆ ಕಲ್ಪನೆಯ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ಸಂವಿಧಾನದ ಅಡಿಯಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿರುವ ರಾಜ್ಯಪಾಲರೇ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ’ ಎಂದು  ಕಾಂಗ್ರೆಸ್‌ ಸಂಸದ ಮಾಣಿಕ್ಯಂ ಟ್ಯಾಗೋರ್‌  ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT