ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ಹಿರಿಯ IPS ಅಧಿಕಾರಿ ಕೃಷ್ಣ, ವೇಣುಗೋಪಾಲ್ ನೇಮಕ

Published 16 ಮೇ 2024, 13:44 IST
Last Updated 16 ಮೇ 2024, 13:44 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಐಪಿಎಸ್‌ ಅಧಿಕಾರಿಗಳಾದ ಎ.ವೈ.ವಿ. ಕೃಷ್ಣ ಮತ್ತು ಎನ್‌. ವೇಣುಗೋಪಾಲ್ ಅವರು ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಇವರಿಬ್ಬರೂ 1995ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಗಳಾಗಿದ್ದು, ಎ.ವೈ.ವಿ. ಕೃಷ್ಣ ಅವರು(ಅಸ್ಸಾಂ–ಮೇಘಾಲಯ ಕೇಡರ್‌) ಪ್ರಸ್ತುತ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ(ಸಿಆರ್‌ಪಿಎಫ್‌) ಮಹಾ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೇಣುಗೋಪಾಲ್‌ ಅವರು(ಹಿಮಾಚಲ ಪ್ರದೇಶ ಕೇಡರ್‌) ಪ್ರಸ್ತುತ ಸಿಬಿಐನ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃಷ್ಣ ಅವರು ಆ.6, 2028ರ ವರೆಗೆ ಹಾಗೂ ವೇಣುಗೋಪಾಲ್‌ ಅವರು ಮೇ 24, 2027ರ ವರೆಗೆ ಸಿಬಿಐನ ಹೆಚ್ಚುವರಿ ನಿರ್ದೇಶಕ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯವು ತನ್ನ ಪ್ರತ್ಯೇಕ ಆದೇಶಗಳಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT