ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಕ್ಕೆ ಸೆಂಥಿಲ್‌ರನ್ನು ಹಾಜರುಪಡಿಸಿದ ಇ.ಡಿ

Published 22 ಏಪ್ರಿಲ್ 2024, 14:37 IST
Last Updated 22 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ಚೆನ್ನೈ : ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಸ್ಥಳೀಯ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿತು.‌

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಪಡೆಯಲು ಸೆಂಥಿಲ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಎರಡು ಬ್ಯಾಂಕ್‌ ಚಲನ್‌ಗಳೂ ಸೇರಿದಂತೆ ಇನ್ನಿತರೆ ಕೆಲವು ದಾಖಲೆಗಳನ್ನು ಸೆಂಥಿಲ್ ಅವರಿಗೆ ನೀಡಿದ ನ್ಯಾಯಾಧೀಶ ಎಸ್‌.ಅಲ್ಲಿ, ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದರು. ಅಂತೆಯೇ, ಸೆಂಥಿಲ್‌ ಅವರ ನ್ಯಾಯಾಂಗ ಬಂಧನವನ್ನು ಇದೇ 25ರವರೆಗೆ ವಿಸ್ತರಿಸಿ ಆದೇಶಿಸಿದರು. 

‘ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಬೇಕು. ಎರಡು ಚಲನ್‌ಗಳನ್ನು ನನಗೆ ನೀಡಬೇಕು ಮತ್ತು ಈ ಹಿಂದೆ ನ್ಯಾಯಾಲಯ ಬ್ಯಾಂಕ್‌ಗೆ ನೀಡಿದ್ದ ಸಮನ್ಸ್‌ಗಳನ್ನು ಹಾಜರುಪಡಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಸೆಂಥಿಲ್‌ ಮಾರ್ಚ್‌ 28ರಂದು ಅರ್ಜಿ ಸಲ್ಲಿಸಿದ್ದರು. 

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಬ್ಯಾಂಕ್‌ ಚಲನ್‌ಗಳನ್ನು ನೀಡಬೇಕಿರುವುದರಿಂದ ಸೆಂಥಿಲ್‌ ಅವರನ್ನು ಇದೇ 22ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು’ ಎಂದು ಜೈಲಿನ ಅಧಿಕಾರಿಗಳಿಗೆ ಇದೇ 17ರಂದು ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT