ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪೀನ್ಸ್‌ನಲ್ಲಿ ಆಕಸ್ಮಿಕ ಬೆಂಕಿಗೆ ಎರಡು ಮಕ್ಕಳು ಸೇರಿ ಏಳು ಮಂದಿ ಸಾವು

Last Updated 9 ಏಪ್ರಿಲ್ 2023, 11:06 IST
ಅಕ್ಷರ ಗಾತ್ರ

ಆಕಸ್ಮಿಕ ಬೆಂಕಿಗೆ ಇಬ್ಬರು ಮಕ್ಕಳು ಸೇರಿ ಏಳು ಮಂದಿ ಆಹುತಿಯಾದ ದಾರುಣ ಘಟನೆ ಫಿಲಿಪೀನ್ಸ್‌ನ ಮನಿಲಾದ ಟೆಟೆ ಎಂಬಲ್ಲಿ ನಡೆದಿದೆ. ಬೆಂಕಿಗೆ ಹಲವು ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮನಿಲಾದ ಜನನಿಬಿಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ವರ್ಷದ ಬಾಲಕಿ ಮತ್ತು ಹನ್ನೆರಡು ವರ್ಷದ ಬಾಲಕ ಬೆಂಕಿಗಾಹುತಿಯಾಗಿದ್ದಾರೆ. ಬೆಂಕಿಯಲ್ಲಿ ಸಾವನ್ನಪ್ಪಿದ್ದ ಬಾಲಕ ಮತ್ತು ಬಾಲಕಿ ಇಕ್ಕೆಲದಲ್ಲಿ ಸಿಲುಕಿಕೊಂಡಿದ್ದು, ಒಬ್ಬರನ್ನೊಬ್ಬರು ತಬ್ಬಿಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಗೆ ಸುಮಾರು 40 ಮನೆಗಳು ಸಂಪೂರ್ಣ ಹಾನಿಯಾಗಿವೆ. ಸಾವಿರಾರು ಜನರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಕಿರಿದಾದ ಗಲ್ಲಿಗಳಲ್ಲಿ ವಾಸಿಸುತ್ತಿರುವವರೇ ಅಪಾಯಕ್ಕೆ ಹೆಚ್ಚು ಸಿಲುಕಿಕೊಂಡವರು ಎಂದು ಪೊಲೀಸರು ಹೇಳಿದ್ದಾರೆ.

ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬುವುದಕ್ಕೆ ನಿಖರ ಕಾರಣವಿನ್ನು ತಿಳಿದಿಲ್ಲ. ಮನೆಯೊಂದಕ್ಕೆ ಅಳವಡಿಸಿದ್ದ ವಿದ್ಯುತ್‌ ತಂತಿಯಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸತತ ಎರಡು ಗಂಟೆಯ ಕಾರ್ಯಾಚರಣೆ ನಂತರ ಬೆಂಕಿ ನಂದಿಸಲು ಅಗ್ನಿಶಾಮಕದಳದವರು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT