ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪುವನ್ನು ಸ್ಮರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ನ್ನು ಹೊಗಳಿದ ಶಶಿ ತರೂರ್

Last Updated 7 ಮೇ 2019, 13:47 IST
ಅಕ್ಷರ ಗಾತ್ರ

ನವದೆಹಲಿ: ಟಿಪ್ಪು ಸುಲ್ತಾನ್‌ಪುಣ್ಯ ತಿಥಿಯಾದ ಮೇ, 4ರಂದು ಟಿಪ್ಪು ಸ್ಮರಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಟ್ವೀಟ್‌ನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ.

ಗುಲಾಮಗಿರಿಯಲ್ಲಿ ಬದುಕು ಸಾಗಿಸುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ವ್ಯಕ್ತಿ ಟಿಪ್ಪು ಸುಲ್ತಾನ್. ಈ ವ್ಯಕ್ತಿಯನ್ನು ನಾನು ಗೌರವಿಸುತ್ತೇನೆ ಎಂದು ಇಮ್ರಾನ್ ಖಾನ್ ಮೇ.4ರಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನ್ನು ರಿಟ್ವೀಟ್ ಮಾಡಿದ ಶಶಿ ತರೂರ್, ಭಾರತದ ಇತಿಹಾಸದ ಬಗ್ಗೆ ಸಹಜ ಆಸಕ್ತಿತೋರಿಸಿದ್ದಕ್ಕೆ ನಮನಗಳು ಎಂದಿದ್ದಾರೆ.

ಭಾರತದ ಇತಿಹಾಸದ ಬಗ್ಗೆ ಇಮ್ರಾನ್ ಖಾನ್ ತೋರಿಸಿರುವ ಆಸಕ್ತಿ ಪ್ರಾಮಾಣಿಕವಾದುದು.ಅವರು ಓದುತ್ತಾರೆ, ಅವರು ಕಾಳಜಿ ವಹಿಸಿದ್ದಾರೆ.ಪುಣ್ಯತಿಥಿ ದಿನ ಭಾರತದ ಧೀರ ವ್ಯಕ್ತಿ ಬಗ್ಗೆ ಪಾಕಿಸ್ತಾನದ ನಾಯಕರೊಬ್ಬರು ಸ್ಮರಿಸಬೇಕಾಗಿ ಬಂದಿದ್ದು ನಿರಾಶಾದಾಯಕ ಎಂದು ತರೂರ್ ಟ್ವೀಟಿಸಿದ್ದಾರೆ.

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತರೂರ್ ಈ ರೀತಿ ಇಮ್ರಾನ್ ಖಾನ್‌ನ್ನು ಹೊಗಳಿರುವುದರ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ತರೂರ್ ಟ್ವೀಟ್ ಮಾಡಿದ ಕೂಡಲೇ ಬಿಜೆಪಿ ಶಾಸಕರಾಜೀವ್ ಚಂದ್ರಶೇಖರ್ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ ನೀವೂ ನವಜೋತ್ ಸಿಂಗ್ ಸಿಧುನಂತೆ ಇಮ್ರಾನ್ ಜೀ ಮತ್ತು ಬಜವಾಜೀ ಅವರನ್ನು ಆಲಿಂಗನ ಮಾಡುವ ಸಮಯ ಬಂದಿದೆ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನೀವು ಟ್ವೀಟ್ ಮಾಡುವ ಮುನ್ನ ಯೋಚಿಸಿ, ನಾನು ನಿಮ್ಮ ಕಳ್ಳ ನರೇಂದ್ರ ಮೋದಿಯಂತೆ ಶತ್ರುರಾಷ್ಟ್ರದ ಪ್ರಧಾನಿ ಜತೆ ಬಿರಿಯಾನಿ ತಿನ್ನುವುದಿಲ್ಲ ಮತ್ತು ನಿಮ್ಮಂತೆ ನಿಮ್ಮ ಬಾಸ್‌ನ್ನು ಮೆಚ್ಚಿಸಲು ನೈತಿಕತೆಜತೆ ರಾಜಿ ಮಾಡಿಕೊಳ್ಳುವುದಿಲ್ಲ.

ನಿಮ್ಮಂತೆ ಮಾಲೀಕನ ಗುಲಾಮನಾಗಿರುವುದರ ಬದಲು ಟಿಪ್ಪು ಸುಲ್ತಾನ್‌ನಂತೆ ಜೀವನ ಸಾಗಿಸುವುದು ಲೇಸು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT