ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಆಡಳಿತ ನಮಗೆ ಸ್ಫೂರ್ತಿ: ಪ್ರಧಾನಿ ಮೋದಿ

Last Updated 19 ಫೆಬ್ರುವರಿ 2023, 14:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಛತ್ರಪತಿ ಶಿವಾಜಿ ಅವರ ಧೈರ್ಯ ಮತ್ತು ಉತ್ತಮ ಆಡಳಿತವು ನಮಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.

ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ನಮನ ಸಲ್ಲಿಸಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಹಲವು ವರ್ಷಗಳಿಂದ ಶಿವಾಜಿ ಅವರಿಗೆ ನಮನ ಸಲ್ಲಿಸಿದ ತಮ್ಮ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ವೈವಿಧ್ಯತೆ ಹೆಚ್ಚಿಸಿದೆ: ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ 12 ಚೀತಾಗಳನ್ನು ತಂದು ಬಿಟ್ಟಿರುವುದು ಭಾರತ ವನ್ಯಜೀವಿ ವೈವಿಧ್ಯತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಸಚಿವ ಭೂಪೇಂದ್ರ ಯಾದವ್ ಅವರ ಚೀತಾಗಳ ಆಗಮನದ ಕುರಿತ ಟ್ವೀಟ್‌ ಅನ್ನು ಟ್ಯಾಗ್‌ ಮಾಡಿರುವ ಪ್ರಧಾನಿ ಮೋದಿ, ‘ಈ ಬೆಳವಣಿಗೆಯಿಂದ ಭಾರತದ ವನ್ಯಜೀವಿ ವೈವಿಧ್ಯತೆಗೆ ಉತ್ತೇಜನ ದೊರಕಿದಂತಾಗಿದೆ’ ಎಂದು ಹೇಳಿದ್ದಾರೆ.

ಲಡಾಕ್‌ ಜನರ ಜೀವನವನ್ನು ಸುಲಭವಾಗಿಸುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

4.1 ಕಿ.ಮೀ ಉದ್ದದ ಶಿಂಕುನ್ ಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹1,681.51 ಕೋಟಿ ಅನುದಾನ ನೀಡಿದೆ ಎಂದು ಲಡಾಕ್‌ ಸಂಸದ ಜಮ್ಯಾಂಗ್ ತ್ಸೆರಿಂಗ್‌ ನಮ್ಗ್ಯಾಲ್‌ ಅವರು ಟ್ವೀಟ್‌ ಮಾಡಿದ್ದರು. ಇದನ್ನು ಟ್ಯಾಗ್‌ ಮಾಡಿರುವ ಪ್ರಧಾನಿ ಮೋದಿ, ಲಡಾಕ್‌ ಜನರ ಬದುಕನ್ನು ಸರಳವಾಗಿಸುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಭಾರತ–ಯುಎಇ ಬಾಂಧವ್ಯ ಗಟ್ಟಿ:

ಭಾರತ–ಯುಎಇ ನಡುವಿನ ಸಮಗ್ರ ‘ಆರ್ಥಿಕ ಪಾಲುದಾರಿಕೆ ಒಪ್ಪಂದ’ವು (ಸಿಇಪಿಎ) ಭಾರತದ ಉದ್ಯಮಿಗಳು ಮತ್ತು ಗಲ್ಫ್‌ ರಾಷ್ಟ್ರದೊಂದಿಗಿನ ಬಾಂಧವ್ಯಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಮೋದಿ ಹೇಳಿದ್ದಾರೆ.

ಸಿಇಪಿಎ ಒಪ್ಪಂದಕ್ಕೆ ಉಭಯ ದೇಶಗಳು ಕಳೆದ ವರ್ಷ ಫೆ.18ರಂದು ಸಹಿ ಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT