ಲಖನೌ: ಕೌಟುಂಬಿಕ ಕಲಹದಿಂದಾಗಿ ಸಮಾಜವಾದಿ ಪಕ್ಷವನ್ನು ತ್ಯಜಿಸಿದ್ದ ಶಿವಪಾಲ್ ಯಾದವ್ ಮತ್ತೆ ಅಧಿಕೃತವಾಗಿ ಪಕ್ಷಕ್ಕೆ ಮರಳಿದ್ದಾರೆ. ಭಾನುವಾರ ಸಮಾಜವಾದಿ ಪಕ್ಷ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಿಸಿದ್ದು, ಅಖಿಲೇಶ್ ಯಾದವ್ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

2016 ರಲ್ಲಿ ಪಕ್ಷದಿಂದ ಹೊರನಡೆದಿದ್ದ ಶಿವಪಾಲ್, ಕಳೆದ ವರ್ಷ 2022ರ ಡಿಸೆಂಬರ್ನಲ್ಲಿ ಮತ್ತೆ ಅಖಿಲೇಶ್ ಜೊತೆ ಕೈಜೋಡಿಸಿದ್ದರು. ಮುಲಾಯಂ ಸಿಂಗ್ ಯಾದವ್ ನಿಧನದಿಂದಾಗಿ ನಡೆದ ಮೈನ್ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ಗೆ ಶಿವಪಾಲ್ ಬಾಹ್ಯ ಬೆಂಬಲ ನೀಡಿದ್ದರು.

ಸಮಾಜವಾದಿ ಪಕ್ಷ ಭಾನುವಾರ ತನ್ನ 62 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಘೋಷಿಸಿದ್ದು, ಪಟ್ಟಿಯನ್ನು ಪ್ರಕಟಿಸಿದೆ.

14 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಶಿವಪಾಲ್ ಯಾದವ್ ಕೂಡ ಸ್ಥಾನ ಗಳಿಸಿದ್ದಾರೆ. ಇನ್ನುಳಿದಂತೆ ಮೊಹಮ್ಮದ್ ಅಜಂ ಖಾನ್, ಸ್ವಾಮಿ ಪ್ರಸಾದ್ ಮೌರ್ಯ, ರವಿ ಪ್ರಕಾಶ್ ವರ್ಮಾ ಮತ್ತು ಬಲರಾಮ್ ಯಾದವ್ ಸೇರಿದ್ದಾರೆ.

ಅಖಿಲೇಶ್ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿದರೆ, ಕಿರಣ್ಮೋಯ್ ನಂದಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮತ್ತು ರಾಮ್ ಗೋಪಾಲ್ ಯಾದವ್ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಪಕ್ಷದ ಖಜಾಂಚಿಯಾಗಿ ಸುದೀಪ್ ರಂಜನ್ ಸೇನ್ ನೇಮಕಗೊಂಡಿದ್ದಾರೆ.

ಅಖಿಲೇಶ್ ಯಾದವ್ ಅವರೊಂದಿಗಿನ ಬಹಿರಂಗ ವೈಷಮ್ಯದಿಂದ 2016 ರಲ್ಲಿ ಸಮಾಜವಾದಿ ಪಕ್ಷದಿಂದ ಹೊರಗುಳಿದ ಶಿವಪಾಲ್ ಯಾದವ್, 2018 ರಲ್ಲಿ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಸ್ಥಾಪಿಸಿದ್ದರು ಮತ್ತು ಫಿರೋಜಾಬಾದ್ನಿಂದ ಸೋದರಳಿಯ ಅಕ್ಷಯ್ ಯಾದವ್ ವಿರುದ್ಧ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.