ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivapalyadav

ADVERTISEMENT

ಶಿವಪಾಲ್ ಯಾದವ್ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಲಖನೌ: ಕೌಟುಂಬಿಕ ಕಲಹದಿಂದಾಗಿ ಸಮಾಜವಾದಿ ಪಕ್ಷವನ್ನು ತ್ಯಜಿಸಿದ್ದ ಶಿವಪಾಲ್ ಯಾದವ್ ಮತ್ತೆ ಅಧಿಕೃತವಾಗಿ ಪಕ್ಷಕ್ಕೆ ಮರಳಿದ್ದಾರೆ. ಭಾನುವಾರ ಸಮಾಜವಾದಿ ಪಕ್ಷ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಘೋಷಿಸಿದ್ದು, ಅಖಿಲೇಶ್ ಯಾದವ್ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
Last Updated 29 ಜನವರಿ 2023, 10:31 IST
ಶಿವಪಾಲ್ ಯಾದವ್ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

ಮೌರ್ಯ ಹೇಳಿಕೆ ವೈಯಕ್ತಿಕ: ಸಮಾಜವಾದಿ ಪಕ್ಷ ರಾಮನ ಆದರ್ಶ ಪಾಲಿಸುತ್ತದೆ- ಶಿವಪಾಲ್‌

ಲಖನೌ (ಪಿಟಿಐ): ‘ರಾಮಚರಿತ್ರಮಾನಸ’ ಕುರಿತು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿವಾದಾತ್ಮಕ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಪಕ್ಷವು ಭಗವಾನ್‌ ರಾಮ ಮತ್ತು ಕೃಷ್ಣನ ಆದರ್ಶಗಳನ್ನು ಅನುಸರಿಸುತ್ತದೆ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್‌ ಸಿಂಗ್ ಯಾದವ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
Last Updated 24 ಜನವರಿ 2023, 14:23 IST
ಮೌರ್ಯ ಹೇಳಿಕೆ ವೈಯಕ್ತಿಕ: ಸಮಾಜವಾದಿ ಪಕ್ಷ ರಾಮನ ಆದರ್ಶ ಪಾಲಿಸುತ್ತದೆ- ಶಿವಪಾಲ್‌

ಯಾದವ ಸಮುದಾಯಕ್ಕಾಗಿ ಹೊಸ ಸಂಘಟನೆ: ಶಿವಪಾಲ್

ಪ್ರಗತಿಶೀಲ ಸಮಾಜವಾದಿ ಪಕ್ಷ– ಲೋಹಿಯಾ (ಪಿಎಸ್‌ಪಿಎಲ್‌) ಮುಖ್ಯಸ್ಥ ಶಿವಪಾಲ್‌ ಯಾದವ್ ಅವರು ಯಾದವ ಸಮುದಾಯಕ್ಕಾಗಿ ಹೊಸ ಸಂಘಟನೆ ರಚಿಸುವುದಾಗಿ ಗುರುವಾರ ಘೋಷಿಸಿದರು.
Last Updated 1 ಸೆಪ್ಟೆಂಬರ್ 2022, 11:37 IST
ಯಾದವ ಸಮುದಾಯಕ್ಕಾಗಿ ಹೊಸ ಸಂಘಟನೆ: ಶಿವಪಾಲ್

ಕಾಂಗ್ರೆಸ್‌ ಸೇರುವ ಸುದ್ದಿ ಸುಳ್ಳು: ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಸ್ಪಷ್ಟನೆ

ಕಾಂಗ್ರೆಸ್ ಸೇರುವ ವದಂತಿಗಳನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಶುಕ್ರವಾರ ನಿರಾಕರಿಸಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಅವರು ತಿಳಿಸಿದ್ದಾರೆ.
Last Updated 20 ಆಗಸ್ಟ್ 2022, 2:06 IST
ಕಾಂಗ್ರೆಸ್‌ ಸೇರುವ ಸುದ್ದಿ ಸುಳ್ಳು: ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಸ್ಪಷ್ಟನೆ

ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಬೆಂಬಲ ಘೋಷಿಸಿದ ಶಿವಪಾಲ್‌ ಯಾದವ್‌

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಉತ್ತರ ಪ್ರದೇಶದ ಬಿಜೆಪಿ ಪ್ರತಿಸ್ಪರ್ಧಿ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಘೋಷಿಸಿದ್ದಾರೆ.
Last Updated 9 ಜುಲೈ 2022, 12:20 IST
ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಬೆಂಬಲ ಘೋಷಿಸಿದ ಶಿವಪಾಲ್‌ ಯಾದವ್‌

ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್‌ ಬಹಿರಂಗ ಆಕ್ರೋಶ

ಮುಲಾಯಂ ಸಿಂಗ್‌ ಯಾದವ್‌ ಅವರ ತಮ್ಮ ಶಿವಪಾಲ್ ಸಿಂಗ್ ಯಾದವ್ ಅವರು ಮಂಗಳವಾರ ಅಣ್ಣನ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಮಾಜವಾದಿ ಪಕ್ಷದ ಯಾದವೀ ಕಲಹ ಬಹಿರಂಗಗೊಂಡಿದೆ.
Last Updated 3 ಮೇ 2022, 9:55 IST
ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್‌ ಬಹಿರಂಗ ಆಕ್ರೋಶ

ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಬಿಜೆಪಿಗೆ ?

ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಮತ್ತೆ ಒಡಕು ಮೂಡಿದ್ದು, ಶಿವಪಾಲ್ ಅವರು ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಶಿವಪಾಲ್ ಅವರು ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಬುಧವಾರ ಭೇಟಿ ಮಾಡಿ ಅರ್ಧತಾಸು ಚರ್ಚಿಸಿರುವುದು ಈ ಊಹಾಪೋಹಕ್ಕೆ ಕಾರಣ. ವಿಧಾನಸಭೆಯಲ್ಲಿ ಎಸ್‌ಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಖಿಲೇಶ್ ಅವರನ್ನು ಆಯ್ಕೆ ಮಾಡಲಾದ ಸಭೆಗೆ ಶಿವಪಾಲ್ ಅವರಿಗೆ ಆಹ್ವಾನವಿರಲಿಲ್ಲ. ಈ ಬಗ್ಗೆ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಅವರಿಗೆ ದೂರು ನೀಡಿದ್ದ ಶಿವಪಾಲ್, ದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂ ಡರನ್ನು ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
Last Updated 31 ಮಾರ್ಚ್ 2022, 18:15 IST
ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಬಿಜೆಪಿಗೆ ?
ADVERTISEMENT

ಶಿವಪಾಲ್‌ ಯಾದವ್‌ಗೆ ಮಾಯಾವತಿಯ ಹಳೆಯ ಬಂಗ್ಲೆ

ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ತೆರವುಗೊಳಿಸಿದ ಬಂಗ್ಲೆಯನ್ನು ಹಿರಿಯ ಶಾಸಕ ಶಿವಪಾಲ್‌ಯಾದವ್‌ಗೆ ನೀಡಿ ಯೋಗಿ ಆದಿತ್ಯನಾಥ್‌ ಸರ್ಕಾರ ಕ್ರಮ ಕೈಗೊಂಡಿದೆ.
Last Updated 12 ಅಕ್ಟೋಬರ್ 2018, 17:56 IST
ಶಿವಪಾಲ್‌ ಯಾದವ್‌ಗೆ ಮಾಯಾವತಿಯ ಹಳೆಯ ಬಂಗ್ಲೆ

ಶಿವಪಾಲ್‌ ಯಾದವ್‌ರಿಂದ ಹೊಸ ಪಕ್ಷ

ಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎಸ್‌ಪಿ ಮುಖಂಡ ಶಿವಪಾಲ್‌ ಯಾದವ್‌ ‘ಸಮಾಜವಾದಿ ಜಾತ್ಯತೀತ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.
Last Updated 29 ಆಗಸ್ಟ್ 2018, 17:59 IST
ಶಿವಪಾಲ್‌ ಯಾದವ್‌ರಿಂದ ಹೊಸ ಪಕ್ಷ
ADVERTISEMENT
ADVERTISEMENT
ADVERTISEMENT