ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಖ್ರಾನ್‌ನಲ್ಲಿ ವಾಯು ಶಕ್ತಿ ದರ್ಶನ: ಚೀನಾ, ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ!

Published 18 ಫೆಬ್ರುವರಿ 2024, 10:17 IST
Last Updated 18 ಫೆಬ್ರುವರಿ 2024, 10:17 IST
ಅಕ್ಷರ ಗಾತ್ರ

ರಾಜಸ್ಥಾನದ ಜೈಸಲ್ಮೇರ್‌ ಬಳಿ ಇರುವ ಪೋಖ್ರಾನ್‌ನಲ್ಲಿ ಶನಿವಾರ ಹಗಲು ಮತ್ತು ರಾತ್ರಿ ಭಾರತದ ವಾಯುಪಡೆಯ ಶಕ್ತಿ ಪ್ರದರ್ಶನ ನಡೆಯಿತು. ಈ ’ವಾಯು ಶಕ್ತಿ‘ಯಲ್ಲಿ 121 ಯುದ್ಧವಿಮಾನಗಳ ಬಲವನ್ನು ಪ್ರದರ್ಶಿಸಲಾಯಿತು. ’ಆತ್ಮನಿರ್ಭರ ಭಾರತ‘ದ ಸಂಕೇತವಾದ ದೇಶೀಯ ಯುದ್ಧವಿಮಾನ ತೇಜಸ್‌ ಮತ್ತು ಹೆಲಿಕಾಪ್ಟರ್‌ಗಳಾದ ಪ್ರಚಂಡ್‌, ಧ್ರುವ್‌ ಕೂಡ ತಮ್ಮ ಶಕ್ತಿ ಪ್ರದರ್ಶಿಸಿದವು. ರಫೇಲ್‌, ಮಿರೇಜ್‌–2000, ಸುಖೋಯ್‌–30 ಎಂಕೆಐನಂತಹ ಅಂತರರಾಷ್ಟ್ರೀಯ ಯುದ್ಧವಿಮಾನಗಳ ಪ್ರದರ್ಶನವೂ ನಡೆಯಿತು. ಪಾಕಿಸ್ತಾನದ ಗಡಿ ಭಾಗದಲ್ಲಿ ಈ ಸಮರಾಭ್ಯಾಸ ನಡೆದರೆ, ಪೂರ್ವ ಲಡಾಖ್‌ನಲ್ಲಿ ಸಂಘರ್ಷದಲ್ಲಿ ತೊಡಗಿರುವ ಚೀನಾಕ್ಕೂ ಈ ಪ್ರದರ್ಶನದ ಮೂಲಕ ಭಾರತವು ಎಚ್ಚರಿಕೆಯ ಸಂದೇಶ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT