ಕೊಚ್ಚಿ: ಕೇರಳದ ಕರಾವಳಿಯಲ್ಲಿ ‘ಎಂವಿ ವಾನ್ ಹೈ 503’ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಟೋಯಿಂಗ್ ಮೂಲಕ ಹಡಗನ್ನು ಸಮುದ್ರದಲ್ಲಿ 40 ನಾಟಿಕಲ್ ಮೈಲು ದೂರದವರೆಗೆ ಸಾಗಿಸಲಾಯಿತು’ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

ಸಿಂಗಪುರ ಧ್ವಜ ಹೊಂದಿದ್ದ ಈ ಹಡಗು, ಕೊಲಂಬೊದಿಂದ ಮುಂಬೈಗೆ ಬರುವ ದಾರಿಯಲ್ಲಿ ಕೇರಳದ ಕರಾವಳಿಯಲ್ಲಿ ಕಂಟೇನರ್ ಸ್ಫೋಟಗೊಂಡು ಬೆಂಕಿ ಅವಘಡಕ್ಕೆ ಸಿಲುಕಿತ್ತು. ಕೇರಳ ಕರಾವಳಿಯಿಂದ 27 ನಾಟಿಕಲ್ ಮೈಲು ದೂರದಲ್ಲಿದ್ದ ಈ ಹಡಗನ್ನು ಟೋಯಿಂಗ್ ಕಾರ್ಯಾಚರಣೆ ನಡೆಸಿ ಇನ್ನಷ್ಟು ದೂರಕ್ಕೆ ಸಾಗಿಸಲಾಯಿತು.

‘ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೇ ಟೋಯಿಂಗ್ ನಡೆಯಿತು. ಕರಾವಳಿ ಕಾವಲು ಪಡೆಯ ಸಾಕ್ಷಂ, ಸಮರ್ಥ್, ವಿಕ್ರಮ್ ಮತ್ತು ನೌಕಾಪಡೆಯ ಶಾರದಾ ಹಡಗುಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಯಲಿದೆ. ಕರಾವಳಿ ಕಾವಲು ಪಡೆಯು, ನೌಕಾ ನಿರ್ದೇಶನಾಲಯದ ಸಹಯೋಗದಲ್ಲಿ ಈ ಹಡಗು ತೀರದಿಂದ ಕನಿಷ್ಠ 50 ನಾಟಿಕಲ್ ಮೈಲು ದೂರದಲ್ಲಿ ಇರುವಂತೆ ನೋಡಿಕೊಳ್ಳಲಿದೆ’ ’ ಎಂದು ಪ್ರಕಟಣೆ ತಿಳಿಸಿದೆ.

‘22 ಮಂದಿ ಸಿಬ್ಬಂದಿ ಹಡಗಿನಲ್ಲಿದ್ದರು. ಇವರಲ್ಲಿ 18 ಜನರನ್ನು ರಕ್ಷಿಸಲಾಗಿದೆ. ಉಳಿದ ನಾಲ್ವರು ನಾಪತ್ತೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.