ನವದೆಹಲಿ(ಪಿಟಿಐ): ‘ಕಳೆದ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಆರು ಮಂದಿ ಭಾರತೀಯ ಕೈದಿಗಳು ಸಾವಿಗೀಡಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ತಿಳಿಸಿದರು.
‘ಮೃತರಲ್ಲಿ ಐವರು ಮೀನುಗಾರರು ಸೇರಿದ್ದಾರೆ. ಸಾವಿಗೀಡಾದವರೆಲ್ಲರೂ ಶಿಕ್ಷೆಯನ್ನು ಪೂರ್ಣಗೊಳಿಸಿದ್ದವರಾಗಿದ್ದಾರೆ. ಈ ರೀತಿಯ ಘಟನೆಗಳು ಎಚ್ಚರಿಕೆಯ ಗಂಟೆಯಾಗಿದೆ’ ಎಂದರು.
‘ತನ್ನ ದೇಶದಲ್ಲಿರುವ ಭಾರತೀಯ ಕೈದಿಗಳ ಸುರಕ್ಷತೆಯನ್ನು ಖಚಿತಪಡಿಸುವುದು ಪಾಕಿಸ್ತಾನದ ಜವಾಬ್ದಾರಿ’ ಎಂದೂ ಅವರು ಹೇಳಿದರು.