ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ–ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊಗೆ: ಪ್ರಯಾಣಿಕರು ಗಾಬರಿ

Last Updated 9 ಏಪ್ರಿಲ್ 2023, 8:55 IST
ಅಕ್ಷರ ಗಾತ್ರ

ಅಮರಾವತಿ (ಆಂಧ್ರಪ್ರದೇಶ): ‌ಚೆನ್ನೈ–ದೆಹಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಗಾಬರಿ ಮೂಡಿಸಿದ ಪ್ರಸಂಗ ನೆಲ್ಲೂರಿನಲ್ಲಿ ಭಾನುವಾರ ನಡೆದಿದೆ.

ಜನರ ಈ ಗಾಬರಿಗೆ ಇತ್ತೀಚೆಗೆ ಕೇರಳದ ರೈಲು ಬೋಗಿಗೆ ಬೆಂಕಿಯಿಟ್ಟ ದುರ್ಘಟನೆಯೇ ಕಾರಣ ಎಂದು ನಂಬಲಾಗಿದೆ.

ಪ್ರಯಾಣದ ವೇಳೆ ಚೆನ್ನೈ–ದೆಹಲಿ ಎಕ್ಸ್‌ಪ್ರೆಸ್‌ನ B-5ನೇ ಬೋಗಿಯಲ್ಲಿ ಹೊಗೆ ಎದ್ದಿರುವುದು ಕಂಡುಬಂತು. ಈ ಸಂದರ್ಭ ಆಗಬಹುದಾದ ದುರಂತ ತಪ್ಪಿಸುವ ಎಚ್ಚರಿಕೆಯಿಂದ ಚಾಲಕರು ರೈಲನ್ನು 20 ನಿಮಿಷಗಳ ಕಾಲ ಕಾವಾಲಿ ನಿಲ್ದಾಣದ ಸಮೀಪ ನಿಲ್ಲಿಸಿದರು.

ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ರೈಲು ಬೋಗಿಯ ಬ್ರೇಕ್ ಜಾಮ್‌ನಿಂದ ಹೊಗೆ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ದುರಸ್ತಿ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT