ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ದಾಳಿಯಲ್ಲಿ ಹೋರಾಡಿದ್ದ ಯೋಧ ಸಂದೀಪ್‌ ಸಿಂಗ್‌ ಹುತಾತ್ಮ

Last Updated 25 ಸೆಪ್ಟೆಂಬರ್ 2018, 10:54 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ತಂಗಧಾರ್‌ ವಲಯದಗಡಿ ನಿಯಂತ್ರಣ ರೇಖೆಯಲ್ಲಿಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಲಾನ್ಸ್‌ ನಾಯಕ್‌ಸಂದೀಪ್‌ ಸಿಂಗ್‌ (30) ಅವರಿಗೆಭಾರತೀಯ ಸೇನೆಮಂಗಳವಾರ ಅಂತಿಮ ನಮನ ಸಲ್ಲಿಸಿತು.

2016ರ ಸೆಪ್ಟೆಂಬರ್‌ನಲ್ಲಿಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯಲ್ಲಿ ನಡೆಸಿದ್ದ ನಿರ್ದಿಷ್ಟ ದಾಳಿಯಲ್ಲಿ ಸಂದೀಪ್‌ ಸಿಂಗ್‌ ಭಾಗವಹಿಸಿದ್ದರು.

‘ಬಾದಾಮಿಬಾಗ್‌ ಕಂಟೋನ್ಮೆಂಟ್‌ನಲ್ಲಿ ಲೆಫ್ಟಿನೆಂಟ್‌ ಜನರಲ್‌ ಎಕೆ ಭಟ್‌ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ರಾಜೇಶ್‌ ಕಲಿಯಾ ಶ್ರೀನಗರದಲ್ಲಿ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕ ದಿಲ್‌ಬಾಗ್‌ ಸಿಂಗ್‌ ಮತ್ತು ಹಲವಾರು ರಕ್ಷಣಾ ಇಲಾಖೆಯ ಪ್ರತಿನಿಧಿಗಳುಭಾಗಿಯಾದರು.

ತಂಗಧಾರ್‌ವಲಯದಲ್ಲಿಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿಸಂದೀಪ್‌ ಸಿಂಗ್‌ ಗಾಯಗೊಂಡಿದ್ದರು. ಗುಂಡೇಟು ತಗುಲಿದ್ದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿಬಿರದಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದರು.

ಸಂದೀಪ್‌ ಸಿಂಗ್‌ ಪಂಜಾಬ್‌ ರಾಜ್ಯದ ಗುರ್‌ದಾಸ್‌ಪುರದಕೋಟ್ಲಾ ಖುರ್ದ್‌ ಗ್ರಾಮದವರು. ಅವರು 2007ರಲ್ಲಿ ಸೇನೆಗೆ ಸೇರಿದ್ದರು.ಸಕಲ ಸೇನಾ ಗೌರವಗಳೊಂದಿಗೆಅವರ ಅಂತಿಮಯಾತ್ರೆಯನ್ನು ಸ್ವಗ್ರಾಮದಲ್ಲಿ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT