ನವದೆಹಲಿ: ಮುಂದಿನ ಎರಡು ತಿಂಗಳಲ್ಲಿ ಭಾರತ ಮತ್ತು ಅಮೆರಿಕದ ನಡುವೆ ವಾಣಿಜ್ಯ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ, ಶೇಕಡ 25ರಷ್ಟು ಇರುವ ದಂಡ ಸುಂಕವನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.

ಅಲ್ಲದೆ, ಶೇ 25ರಷ್ಟು ಇರುವ ಪ್ರತಿಸುಂಕವನ್ನು ಶೇ 10–15ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ. ‘ಶೇ 25ರಷ್ಟು ಇರುವ ದಂಡ ಸುಂಕದ ವಿಚಾರವು ಮುಂದಿನ ಎರಡು ತಿಂಗಳಲ್ಲಿ ಇತ್ಯರ್ಥ ಕಾಣುತ್ತದೆ ಎಂಬುದು ನನ್ನ ವೈಯಕ್ತಿಕ ವಿಶ್ವಾಸ’ ಎಂದು ಅವರು ಕೋಲ್ಕತ್ತದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳು ಭಾರತದ ಪ್ರತಿನಿಧಿಗಳನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದ್ದಾರೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಕಾರಣಕ್ಕೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ದಂಡ ತೆರಿಗೆ ವಿಧಿಸಿದೆ. ‘ನವೆಂಬರ್ 30ರ ನಂತರದಲ್ಲಿ ಈ ಹೆಚ್ಚುವರಿ ತೆರಿಗೆಯು ಇರುವುದಿಲ್ಲ ಎಂಬುದು ನನ್ನ ನಂಬಿಕೆ’ ಎಂದು ನಾಗೇಶ್ವರನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.