ಮುಂಬೈ: ಸಮಾಜವಾದಿ ಶಾಸಕ ಅಬೂ ಆಸಿಂ ಆಜ್ಮಿ ನೀಡಿದ್ದ ಮೊಘಲ್ ದೊರೆ ಔರಂಗಜೇಬನ ಕುರಿತ ಹೇಳಿಕೆ ವಿವಾದ ಸೃಷ್ಟಿಸಿದ್ದು, ಮಹಾರಾಷ್ಟ್ರ ವಿಧಾನಸಭೆಯಿಂದ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.

ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನ ಅಂತ್ಯವಾಗುವವರೆಗೆ ಆಜ್ಮಿಯನ್ನು ಅಮಾನತಿನಲ್ಲಿಡಲಾಗಿದೆ. ಮಾರ್ಚ್ 26ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.

ರಾಜ್ಯ ಸಚಿವ ಚಂದ್ರಕಾಂತ್ ಪಾಟೀಲ್ ಸದನದಲ್ಲಿ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದ್ದು, ಮತದಾನದ ಮೂಲಕ ಅಮಾನತನ್ನು ಘೋಷಿಸಲಾಯಿತು.
.ಔರಂಗಜೇಬನ ಶ್ಲಾಘನೆ: ಎಸ್ಪಿ ಶಾಸಕ ಆಜ್ಮಿ ವಿರುದ್ಧ ತನಿಖೆ.
ಆಜ್ಮಿ ಹೇಳಿದ್ದೇನು?

ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿರುವ ಆಜ್ಮಿ ಅವರು, ‘ಔರಂಗಜೇಬ ಅವರ ಆಡಳಿತದಲ್ಲಿ ಭಾರತದ ಗಡಿಯು ಅಫ್ಗಾನಿಸ್ತಾನ ಮತ್ತು ಬರ್ಮಾ (ಮ್ಯಾನ್ಮಾರ್ )ವರೆಗೂ ವಿಸ್ತರಿಸಿತ್ತು. ನಮ್ಮ ಜಿಡಿಪಿಯು ವಿಶ್ವದ ಜಿಡಿಪಿಯ ಶೇ 24ರಷ್ಟಿತ್ತು. ಭಾರತವನ್ನು ಚಿನ್ನದ ಗುಬ್ಬಚ್ಚಿ ಎಂದು ಕರೆಯಲಾಗುತ್ತಿತ್ತು’ ಎಂದು ಹೇಳಿದ್ದರು.

ಔರಂಗಜೇಬ ಮತ್ತು ಛತ್ರಪತಿ ಸಂಭಾಜಿ ಮಹಾರಾಜ ನಡುವಿನ ಯುದ್ಧದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೊಂದು ರಾಜಕೀಯ ಕದನವಾಗಿತ್ತು ಎಂದು ಹೇಳಿದ್ದರು.
.ಗೋವಾ ಬೀದಿಯಲ್ಲಿ ಗಲಾಟೆ: ಮಹಾರಾಷ್ಟ್ರ ಶಾಸಕ ಆಜ್ಮಿ ಪುತ್ರನ ವಿರುದ್ಧ ಪ್ರಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.