ಪಣಜಿ: ಸಾರ್ವಜನಿಕ ಸ್ಥಳದಲ್ಲಿ ಜಗಳವಾಡಿ, ಶಾಂತಿ ಕದಡಿದ ಆರೋಪದ ಮೇಲೆ ಮಹಾರಾಷ್ಟ್ರ ಸಮಾಜವಾದಿ ಶಾಸಕ ಅಬೂ ಆಸಿಂ ಆಜ್ಮಿ ಅವರ ಪುತ್ರ ಅಬೂ ಫರ್ಹಾನ್ ಆಜ್ಮಿ ಮತ್ತು ಇತರರ ವಿರುದ್ದ ಗೋವಾ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಮತ್ತು ಉದ್ಯಮಿಯಾಗಿರುವ ಅಬು ಫರ್ಹಾನ್ ಆಜ್ಮಿ ನಟಿ ಆಯೇಷಾ ಟಕಿಯಾ ಅವರ ಪತಿ.
.ಔರಂಗಜೇಬನ ಶ್ಲಾಘನೆ: ಎಸ್ಪಿ ಶಾಸಕ ಆಜ್ಮಿ ವಿರುದ್ಧ ತನಿಖೆ.
‘ವ್ಯಕ್ತಿಯೊಬ್ಬರು ಸೋಮವಾರ ರಾತ್ರಿ 11.12ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೈಡೋಲಿಮ್ನ ಸೂಪರ್ ಮಾರ್ಕೆಟ್ನಲ್ಲಿ ಎರಡು ಗುಂಪಿನ ಮಧ್ಯೆ ಜಗಳವಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಗಲಾಟೆಯ ಸಮಯದಲ್ಲಿ ಫರ್ಹಾನ್ ತಮ್ಮ ಬಳಿ ಪರವಾನಗಿ ಪಡೆದ ಬಂದೂಕು ಇರುವುದಾಗಿ ಎದುರಿಗಿದ್ದ ಗುಂಪಿಗೆ ಗದರಿಸಿದ್ದಾರೆ. ಇದರಿಂದ ಗಲಾಟೆ ತೀವ್ರ ಸ್ವರೂಪ ಪಡೆದಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಎರಡೂ ಗುಂಪುಗಳನ್ನು ಕಲಾಂಗುಟ್ ಠಾಣೆಗೆ ಕರೆದೊಯ್ದು, ಎಲ್ಲ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಇನ್ಸ್ಪೆಕ್ಟರ್ ಪರೇಶ್ ನಾಯ್ಕ್ ಪಿಟಿಐಗೆ ತಿಳಿಸಿದ್ದಾರೆ.

ಅಬು ಫರ್ಹಾನ್ ಆಜ್ಮಿ, ಜಿಯಾನ್ ಫರ್ನಾಂಡಿಸ್, ಜೋಸೆಫ್ ಫರ್ನಾಂಡಿಸ್, ಶಾಮ್ ಸೇರಿ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿದ ಫರ್ಹಾನ್ ಪತ್ನಿ ನಟಿ ಆಯೇಷಾ

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫರ್ಹಾನ್ ಪತ್ನಿ, ನಟಿ ಆಯೇಷಾ, ‘ಗೋವಾದ ಸ್ಥಳೀಯ ಗೂಂಡಾಗಳು ನನ್ನ ಪತಿ ಮತ್ತು ಮಗನನ್ನು ಹೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ನನ್ನ ಪತಿಯನ್ನು ರಕ್ಷಿಸಲು ಪೊಲೀಸರಿಗೆ ಕರೆ ಮಾಡಲಾಗಿತ್ತು. ಆದರೆ ಗೋವಾ ಪೊಲೀಸರು ನನ್ನ ಪತಿ ಮತ್ತು ಮಗನನ್ನೇ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.