ಹ್ಯೂಸ್ಟನ್: ಸ್ಟಾರ್ಬಕ್ಸ್ ತನ್ನ ಹೊಸ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (ಸಿಟಿಒ) ಭಾರತ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಆನಂದ್ ವರದರಾಜನ್ ಅವರನ್ನು ನೇಮಕ ಮಾಡಿದೆ.

‘ಜನವರಿ 19ರಂದು ಅಧಿಕಾರ ವಹಿಸಿಕೊಳ್ಳಲಿರುವ ವರದರಾಜನ್ ಅವರು, ಕಂಪನಿಯ ಕಾರ್ಯನಿರ್ವಾಹಕ ನಾಯಕತ್ವ ತಂಡವನ್ನು ಸೇರಲಿದ್ದಾರೆ’ ಎಂದು ಸ್ಟಾರ್ಬಕ್ಸ್ ತಿಳಿಸಿದೆ. ಅವರ ಸ್ಥಾನದಲ್ಲಿದ್ದ ಡೆಬ್ ಹಾಲ್ ಲೆಫೆವ್ರೆ ಸೆಪ್ಟೆಂಬರ್ನಲ್ಲಿ ನಿವೃತ್ತರಾಗಿದ್ದರು.

ವರದರಾಜನ್ ಅವರು ಸುಮಾರು 19 ವರ್ಷ ಅಮೆಜಾನ್ನಲ್ಲಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಅವರು ಒರಾಕಲ್ ಹಾಗೂ ಹಲವು ನವೋದ್ಯಮಗಳೊಂದಿಗೆ ಕೆಲಸ ಮಾಡಿದ್ದರು.

ವರದರಾಜನ್ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಹಳೆಯ ವಿದ್ಯಾರ್ಥಿಯಾಗಿದ್ದು, ಪರ್ಡ್ಯೂ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.