ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಳನಿಸ್ವಾಮಿಗೆ ರಾಹುಲ್‌ ಕರೆ ಮಾಡಿಲ್ಲ: ಕಾಂಗ್ರೆಸ್‌

Last Updated 3 ಜುಲೈ 2022, 13:23 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್ಗಾಂಧಿ ಅವರು ಎಐಎಡಿಎಂಕೆ ನಾಯಕ ಇ. ಪಳನಿಸ್ವಾಮಿ ಅವರಿಗೆ ಕರೆ ಮಾಡಿವಿರೋಧಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಕೋರಿದ್ದಾರೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು’ ಎಂದು ಕಾಂಗ್ರೆಸ್‌ ಭಾನುವಾರ ಹೇಳಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ), ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ರಾಹುಲ್‌ ಗಾಂಧಿ ಅವರು ಪಳನಿಸ್ವಾಮಿ ಅವರಿಗೆ ಯಾವುದೇ ದೂರವಾಣಿ ಕರೆ ಮಾಡಿಲ್ಲ. ಡಿಎಂಕೆ-ಕಾಂಗ್ರೆಸ್ ಮೈತ್ರಿ ದೃಢವಾಗಿದೆ. ಗೊಂದಲ ಮೂಡಿಸುವ ಮತ್ತು ದುರ್ಬಲಗೊಳಿಸುವ ಇಂತಹ ಕುಚೇಷ್ಟೆಯ ಪ್ರಯತ್ನಗಳನ್ನು ಮೀರಿ ನಿಲ್ಲುವಷ್ಟು ಮೈತ್ರಿ ದೃಢವಾಗಿದೆ’ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೇ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಮಿತ್ರ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಒಡಿಶಾದ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT