ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಪ್ರಬಲ ಭೂಕಂಪ

Published 18 ಏಪ್ರಿಲ್ 2024, 13:15 IST
Last Updated 18 ಏಪ್ರಿಲ್ 2024, 13:15 IST
ಅಕ್ಷರ ಗಾತ್ರ

ಟೋಕಿಯೊ: ಆಗ್ನೇಯ ಜಪಾನ್‌ನಲ್ಲಿ 6.6 ಕಂಪನಾಂಕ ತೀವ್ರತೆಯ ಪ್ರಬಲ ಭೂಕಂಪವು ಬುಧವಾರ ರಾತ್ರಿ ಸಂಭವಿಸಿದ್ದು, ಒಂಬತ್ತು ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದಿಂದ ನೀರಿನ ಕೊಳವೆಗಳಿಗೆ ಹಾನಿಯುಂಟಾಗಿದೆ ಮತ್ತು ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವೂ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಶಿಕೋಕು ದ್ವೀಪದ ಪಶ್ಚಿಮ ಕರಾವಳಿ ಬಳಿಯ ಬುಂಗೊ ಕಾಲುವೆ ಹತ್ತಿರ ಸಮುದ್ರ ಮೇಲ್ಮೈಯಿಂದ 50 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಆದರೆ, ಸುನಾಮಿ ಸಂಭವಿಸುವ ಆತಂಕವಿಲ್ಲ ಎಂದು ಜಪಾನ್‌ನ ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT