ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016ರಲ್ಲಿ ದೇಶದ ಒಟ್ಟು ಸಾವಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಪಾಲು ಶೇ 28: ವರದಿ

Last Updated 25 ಮಾರ್ಚ್ 2022, 13:05 IST
ಅಕ್ಷರ ಗಾತ್ರ

ನವದೆಹಲಿ:2016ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಪೈಕಿ ಹೃದಯ ಸಂಬಂಧಿತ ಕಾಯಿಲೆಗಳ ಪಾಲು ಶೇ 28 ರಷ್ಟಿದೆ. ಇದರ ಪ್ರಮಾಣ 1990ರಲ್ಲಿ ಶೇ 15.2 ರಷ್ಟಿತ್ತು ಎಂದು ಅಧ್ಯಯನ ವರದಿಯೊಂದು ಹೇಳಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಲೋಕಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ರಾಜ್ಯ ಖಾತೆ ಸಚಿವೆ ಭಾರತಿ ಪವಾರ್‌, 2018ರಲ್ಲಿ ಭಾರತೀಯವೈದ್ಯಕೀಯ ಮಂಡಳಿ ಪ್ರಕಟಿಸಿದ ವರದಿಯು ಈ ಮೇಲಿನ ಅಂಶವನ್ನು ತಿಳಿಸುತ್ತದೆ. ಮತ್ತೊಂದು ವರದಿ ಪ್ರಕಾರ, 1990–2017ರ ನಡುವೆ ದೀರ್ಘಕಾಲದ ಕಿಡ್ನಿ ಸಂಬಂಧಿತ ಕಾಯಿಲೆಗಳು ಶೇ 5.6 ರಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ಅಲ್ಲದ ರೋಗಗಳು ದೇಶದ ಶೇ 63 ರಷ್ಟು ಸಾವಿಗೆ ಕಾರಣವಾಗಿವೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT