ನವದೆಹಲಿ: ‘ಅಕ್ರಮ ವಲಸಿಗರು ದೇಶದೊಳಗೆ ನುಸುಳುವುದನ್ನು ತಪ್ಪಿಸಲು ಗಡಿಯಲ್ಲಿ ಅಮೆರಿಕದಂತೆಯೇ ತಡೆಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಬಯಸಿದೆಯೇ’ ಎಂಬುದನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರಕ್ಕೆ ಕೇಳಿತು.

ಬಾಂಗ್ಲಾದೇಶದ ಅಕ್ರಮ ಒಳನುಸುಳುಕೋರರನ್ನು ಗಡಿಪಾರು ಮಾಡುವಲ್ಲಿ ಸರ್ಕಾರಗಳು ಅಳವಡಿಸಿಕೊಂಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್ಒಪಿ) ಬಗ್ಗೆ ವಿವರಣೆ ನೀಡುವಂತೆಯೂ ಹೇಳಿದೆ.

‘ಬಂಗಾಳಿ ಭಾಷೆ ಮಾತನಾಡುವ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶದ ಪ್ರಜೆಗಳು ಎಂಬ ಅನುಮಾನದ ಮೇಲೆ ಬಂಧಿಸಲಾಗುತ್ತಿದೆ’ ಎಂದು ಹೇಳುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು, ‘ನಿರ್ದಿಷ್ಟ ಭಾಷೆಯನ್ನು ಬಳಸುವುದನ್ನು ವಿದೇಶಿಯರು ಎಂಬುದನ್ನು ಗುರುತಿಸಲು ಬಳಸಲಾಗುತ್ತಿದೆಯೆ’ ಎಂದು ಕೇಂದ್ರದಿಂದ ಸ್ಪಷ್ಟನೆ ಕೋರಿತು.

ಬಂಗಾಳಿ ಮತ್ತು ಪಂಜಾಬಿ ಮಾತನಾಡುವ ಭಾರತೀಯರು ನೆರೆಹೊರೆಯ ಕೆಲವು ದೇಶಗಳೊಂದಿಗೆ ಒಂದೇ ಭಾಷೆ ಮಾತನಾಡುವುದರ ಜೊತೆಗೆ ಸಂಸ್ಕೃತಿಯನ್ನೂ ಹಂಚಿಕೊಂಡಿದ್ದಾರೆ. ಆದರೆ, ಗಡಿಯಿಂದ ವಿಭಜನೆಗೊಂಡಿದ್ದರೂ, ಭಾಷಾ ಪರಂಪರೆ ಮತ್ತು ಸಾಂಸ್ಕೃತಿಕ ಐತಿಹ್ಯದ ಒಂದೇ ಪರಂಪರೆಯನ್ನು ಇಂದಿಗೂ ಅನುಸರಿಸುತ್ತಿದ್ದಾರೆ’ ಎಂದೂ ನ್ಯಾಯಾಲಯ ಇದೇ ಸಂದರ್ಭ ವಿವರಿಸಿದೆ.

ದೇಶವು ಪಂಜಾಬ್ ಮತ್ತು ಬಂಗಾಳದಲ್ಲಿ ಸಾಮಾನ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆನುವಂಶಿಕವಾಗಿ ಪಡೆದಿದ್ದು, ಅಲ್ಲಿ ಭಾಷೆ ಒಂದೇ ಆಗಿರುತ್ತದೆ. ಆದರೆ ಗಡಿಯು ದೇಶವನ್ನು ವಿಭಜಿಸಿದೆ ಎಂದು ಹೇಳಿದೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಪಶ್ಚಿಮ ಬಂಗಾಳ ವಲಸಿಗರ ಕಲ್ಯಾಣ ಮಂಡಳಿಯ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ‘ಗರ್ಭಿಣಿಯನ್ನು ವಿದೇಶಿಗಳು ಎಂದು ನಿರ್ಧರಿಸದೆ, ಬಲವಂತದಿಂದ ದೇಶದಿಂದ ಹೊರಕ್ಕೆ ಹಾಕಲಾಗಿದೆ. ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದುದಕ್ಕೆ ಆಕೆಯನ್ನು ಹೊರ ತಳ್ಳಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.

‘ಸರಿಯಾದ ವಿಧಾನ ಅನುಸರಿಸದೆ ಭಾರತ ಪ್ರವೇಶಿಸುವುದು ಸಾಧ್ಯವಿಲ್ಲ ಎಂಬುದನ್ನು ಅಕ್ರಮ ವಲಸಿಗರು ತಿಳಿದಿದ್ದಾರೆ. ಅವರು ದೇಶ ಪ್ರವೇಶಿಸುತ್ತಿದ್ದಂತೆ, ಅಧಿಕೃತ, ಕಾನೂನುಬದ್ಧ ಮತ್ತು ಸಮರ್ಥನೀಯ ಕಾನೂನು ಅಸ್ತಿತ್ವವನ್ನು ವಿವರಿಸಬೇಕಾಗುತ್ತದೆ’ ಎಂದು ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.