ಅಕ್ರಮ ಗಣಿಗಾರಿಕೆ ಸರಿಪಡಿಸಲಾಗದ ಹಾನಿಗೆ ಕಾರಣವಾಗಬಹುದು ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಅರಾವಳಿ ಪರ್ವತಶ್ರೇಣಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ವಿಷಯಗಳ ಸಮಗ್ರ ಪರಿಶೀಲನೆಗಾಗಿ ತಜ್ಞರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.

ಅರಾವಳಿ ಪರ್ವತಶ್ರೇಣಿ ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾಗಿದ್ದು, ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ವ್ಯಾಪಿಸಿದೆ. ಇದು ಮರುಭೂಮೀಕರಣ ತಡೆಗಟ್ಟುವಿಕೆ, ಭೂಗರ್ಭ ಜಲ ಮಟ್ಟ ಕಾಪಾಡುವಿಕೆ, ಜೀವವೈವಿಧ್ಯ ಮತ್ತು ಹವಾಮಾನ ಸಮತೋಲನಕ್ಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ದೀರ್ಘಕಾಲದಿಂದ ಅಕ್ರಮ ಗಣಿಗಾರಿಕೆಯ ಸಮಸ್ಯೆ ಇದೆ, ಇದು ಪರಿಸರಕ್ಕೆ ಗಂಭೀರ ಹಾನಿ ಉಂಟುಮಾಡುತ್ತಿದೆ.

2025ರ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಪರಿಸರ ಸಚಿವಾಲಯದ ತಜ್ಞರ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿ, ಅರಾವಳಿ ಬೆಟ್ಟಗಳನ್ನು ಏಕರೂಪದ ವ್ಯಾಖ್ಯಾನ ನೀಡಿತ್ತು. ಅದರಂತೆ ಅರಾವಳಿ ಬೆಟ್ಟ ಎಂದರೆ ಸ್ಥಳೀಯ ಮಟ್ಟಕ್ಕಿಂತ ಕನಿಷ್ಠ 100 ಮೀಟರ್ ಎತ್ತರದ ಭೂರೂಪ. ಅರಾವಳಿ ಶ್ರೇಣಿ ಎಂದರೆ 500 ಮೀಟರ್ನೊಳಗೆ ಇರುವ ಎರಡು ಅಥವಾ ಹೆಚ್ಚಿನ ಬೆಟ್ಟಗಳು.

ಸುಪ್ರೀಂ ಕೋರ್ಟ್ನ ಈ ವ್ಯಾಖ್ಯಾನದಿಂದ ಅರಾವಳಿಯ ದೊಡ್ಡ ಭಾಗಗಳು ಸಂರಕ್ಷಣೆಯ ಹೊರಗುಳಿಯಬಹುದು ಎಂಬ ಆತಂಕ ವ್ಯಕ್ತವಾಯಿತು. ಇದರಿಂದ ಅಕ್ರಮ ಗಣಿಗಾರಿಕೆಗೆ ದಾರಿ ಸುಗಮವಾಗಬಹುದು ಎಂದು ಪರಿಸರ ತಜ್ಞರು, ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ (suo motu) ಪ್ರಕರಣ ದಾಖಲಿಸಿಕೊಂಡಿತು. ನವೆಂಬರ್ 20 ರಂದು ನೀಡಿದ್ದ ತನ್ನದೇ ಆದೇಶಕ್ಕೆ ಡಿಸೆಂಬರ್ 29, 2025ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ವ್ಯಾಖ್ಯಾನದಲ್ಲಿ ಗಂಭೀರ ಅಸ್ಪಷ್ಟತೆಗಳಿವೆ ಎಂದು ಗಮನಿಸಿ, ಹೊಸ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲು ಸೂಚಿಸಿತ್ತು.

ಇದೀಗ ಅಕ್ರಮ ಗಣಿಗಾರಿಕೆಯು ಪರಿಸರದಲ್ಲಿ ಸರಿಪಡಿಸಲಾಗದ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಅರಾವಳಿ ಬೆಟ್ಟಗಳಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳ ಸಮಗ್ರ ತನಿಖೆ ನಡೆಸಲು ಡೊಮೇನ್ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ಬುಧವಾರ ಹೇಳಿದೆ.
.ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ.ಅರಾವಳಿ ರಕ್ಷಿಸಲು ಸುಪ್ರೀಂಗೆ ರಾಜೇಂದ್ರ ಸಿಂಗ್ ಮನವಿ; ತಡೆಗೆ ಸ್ವಾಗತ.

ಅರಾವಳಿ ಪ್ರದೇಶದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಯದಂತೆ ಖಚಿತಪಡಿಸಿಕೊಳ್ಳುವುದು

ಅರಾವಳಿ ತಜ್ಞರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವುದು.

ಇದು ಕೋರ್ಟ್ನ ನೇರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಡಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮತ್ತು ಅಮಿಕಸ್ ಕ್ಯೂರಿ ಕೆ. ಪರಮೇಶ್ವರ್ ಅವರು 4 ವಾರಗಳೊಳಗೆ ಪರಿಸರ ತಜ್ಞರು, ವಿಜ್ಞಾನಿಗಳು ಮತ್ತು ಗಣಿಗಾರಿಕೆ ತಜ್ಞರ ಹೆಸರುಗಳನ್ನು ಸೂಚಿಸಬೇಕು ಎಂದು ಆದೇಶ ನೀಡಿದೆ.

ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಅಕ್ರಮ ಗಣಿಗಾರಿಕೆ ನಡೆಯದಂತೆ ಭರವಸೆ ನೀಡಿದ್ದನ್ನು ಕೋರ್ಟ್ ದಾಖಲಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.