ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳಲ್ಲಿ ‘ಸ್ವಚ್ಛ ಭಾರತ’ ಪರಿಣಾಮ ಬೀರಿದೆ : ಮೋಹನ್ ಭಾಗವತ್‌

Published 22 ಜುಲೈ 2023, 13:45 IST
Last Updated 22 ಜುಲೈ 2023, 13:45 IST
ಅಕ್ಷರ ಗಾತ್ರ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ ಅಭಿಯಾನ’ ದೇವಾಲಯಗಳು ಮತ್ತು ಅವುಗಳ ಸ್ವಚ್ಛತೆಯ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.

ಮೂರು ದಿನಗಳ ಅಂತರರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್ಪೋ (ಐಟಿಸಿಎಕ್ಸ್) 2023 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂಜಾ ಸ್ಥಳಗಳು ಸಹ ‘ಶುದ್ಧತೆಯ ಸಂಕೇತ’ ಆಗಿರುವುದರಿಂದ ಸ್ವಚ್ಛತೆಯು ದೇವಾಲಯ ನಿರ್ವಹಣೆಯ ನಿರ್ಣಾಯಕ ಅಂಶವಾಗಿದೆ ಎಂದು ಪ್ರತಿಪಾದಿಸಿದರು.

‘ದೇವಾಲಯಗಳು ಪರಿಶುದ್ಧತೆಯ ಸಂಕೇತವಾಗಿದೆ. ಸ್ವಚ್ಛ ಭಾರತ ದೇವಾಲಯಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ದೇವಾಲಯ ಸೇವೆ ಪರಂಪರೆಯನ್ನು ಮುಂದಿನ ಪೀಳಿಗೆಗೆ ರವಾನಿಸಬೇಕಾಗಿದೆ. ಇದಕ್ಕಾಗಿ ದೇವಾಲಯ ಪರಿಸರ ವ್ಯವಸ್ಥೆಯ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮುಖ್ಯವಾಗಿದೆ’ ಎಂದರು. 

32 ದೇಶಗಳು ಮತ್ತು ಭಾರತದ 350 ದೇವಾಲಯಗಳ ಸಿಇಒಗಳು ಮತ್ತು ನಿರ್ವಹಣಾ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಟ್ಟು 16 ಅಧಿವೇಶನಗಳು ನಡೆಯಲಿವೆ ಎಂದು ಇಂಟರ್‌ನ್ಯಾಷನಲ್‌ ಟೆಂಪಲ್ಸ್ ಕನ್ವೆನ್ಷನ್ ಮತ್ತು ಎಕ್ಸ್ಪೋ 2023 ರ ಸಂಸ್ಥಾಪಕ ಗಿರೀಶ್ ಕುಲಕರ್ಣಿ ಹೇಳಿದ್ದಾರೆ.

ಸುರಕ್ಷತೆ, ವಿಪತ್ತು ನಿರ್ವಹಣೆ, ಭದ್ರತೆ, ನಿಧಿ ನಿರ್ವಹಣೆ, ಕಣ್ಗಾವಲು, ವೈದ್ಯಕೀಯ ಉಪಕ್ರಮ ಮತ್ತು 'ಲಂಗರ್' (ಸಮುದಾಯ ಅಡುಗೆಮನೆ) ಮುಂತಾದ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಈ ಕಾರ್ಯಕ್ರಮವನ್ನು ಕಾಶಿಯಲ್ಲಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಶ್ಲಾಘಿಸಿದರು.

ಐಟಿಸಿಎಕ್ಸ್‌ ಅಧ್ಯಕ್ಷ ಪ್ರಸಾದ್ ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT