ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ಅಗ್ನಿವೇಶ್ ವಂಚಕ, ವಿದೇಶಿ ಏಜೆಂಟ್: ಜಾರ್ಖಂಡ್ ಸಚಿವ 

Last Updated 18 ಜುಲೈ 2018, 12:32 IST
ಅಕ್ಷರ ಗಾತ್ರ

ನವದೆಹಲಿ: ಸ್ವಾಮಿ ಅಗ್ನಿವೇಶ್ ವಂಚಕ ಮತ್ತು ವಿದೇಶಿ ಏಜೆಂಟ್ ಎಂದು ಜಾರ್ಖಂಡ್ ರಾಜ್ಯದ ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್ ಹೇಳಿದ್ದಾರೆ. ನನಗೆ ತಿಳಿದಿರುವಂತೆ ಸ್ವಾಮಿ ಅಗ್ನಿವೇಶ್ ವಿದೇಶದಿಂದ ಬರುವ ದೇಣಿಗೆಯಿಂದ ಬದುಕುತ್ತಿದ್ದಾರೆ. ಕಾವಿ ವಸ್ತ್ರದಿಂದ ಅವರು ಮೋಸ ಮಾಡುತ್ತಿದ್ದಾರೆ.ಅವರೊಬ್ಬ ವಂಚಕ, ಸ್ವಾಮಿ ಅಲ್ಲ.ಜನಪ್ರಿಯತೆ ಗಳಿಸುವುದಕ್ಕಾಗಿ ಅವರು ತಮ್ಮ ಮೇಲೆಯೇ ದಾಳಿ ಸಂಚು ರೂಪಿಸಿದ್ದಾರೆ ಎಂದು ಸಚಿವರು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಾರ್ಖಂಡ್ ವಿಧಾಸಭೆಯ ಹೊರಗೆ ಮಾಧ್ಯಮದವರಲ್ಲಿ ಸಿ.ಪಿ.ಸಿಂಗ್ ಈ ರೀತಿ ಹೇಳಿದ್ದರು.
ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಬುಧವಾರ ಜಾರ್ಖಂಡ್ ವಿಧಾನಸಭೆಯಲ್ಲಿ ವಿಪಕ್ಷಗಳು ಗದ್ದಲವನ್ನುಂಟು ಮಾಡಿದ್ದವು.ಆ ಗದ್ದಲಕ್ಕೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಬೇಕಾಗಿ ಬಂದಿತ್ತು.

ಏನಿದು ಪ್ರಕರಣ?

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಅವರ ಮೇಲೆ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಹಲ್ಲೆ ನಡೆಸಿ, ಬಟ್ಟೆ ಹರಿದಿರುವ ಘಟನೆ ಪಾಕುರ್‌ ಎಂಬಲ್ಲಿ ಮಂಗಳವಾರ ನಡೆದಿತ್ತು.

ಲಿಟ್ಟಿಪದಾದಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅಗ್ನಿವೇಶ್‌ಇಲ್ಲಿನ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಹೋಟೆಲ್‌ ಎದುರು ಜಮಾಯಿಸಿದ್ದ ಕಾರ್ಯಕರ್ತರು ಬೆಳಗ್ಗಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. ಅವರು ಹೋಟೆಲ್‌ನಿಂದ ಹೊರಬರುತ್ತಿದ್ದಂತೆ ಮಾರಣಾಂತಿಕ ಹಲ್ಲೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT