‘ಇತ್ತೀಚೆಗಿನ ಚುನಾವಣೆಗಳಲ್ಲಿ ‘ಹವಾಮಾನ ಬದಲಾವಣೆ’ಗೆ ಸಂಬಂಧಿಸಿದಂತೆ ಮತ ಪಡೆಯುವ ಉದ್ದೇಶದಿಂದ ಸಕಾರಾತ್ಮಕವಾಗಿ ಮಾತನಾಡುತ್ತಿದ್ದೇವೆ. ಈಗಂತೂ ಸಾಕಷ್ಟು ಪ್ರಮಾಣದಲ್ಲಿ ನೀರಾವರಿ ವ್ಯವಸ್ಥೆ ಲಭ್ಯವಿದ್ದು, ರೈತರು ಮೋಟರ್ ಪಂಪ್ ಚಾಲೂ ಮಾಡಿ, ಮನೆಗೆ ಹೋಗಿ ಮಲಗುತ್ತಾರೆ. ಬೆಳಿಗ್ಗೆ ಎದ್ದು ಬರುವ ವೇಳೆಗೆ ಅವರ ಜಮೀನಿಗೆ ನೀರು ಹಾಯಿಸುವುದು ಮಾತ್ರವಲ್ಲದೇ, ಪಕ್ಕದ ಜಮೀನಿಗೂ ನೀರು ಹರಿದುಹೋಗಿರುತ್ತದೆ. ವಾಸ್ತವದಲ್ಲಿ, ನಮ್ಮ ಜಲಸಂಪನ್ಮೂಲಗಳು ವ್ಯರ್ಥವಾಗಿ ಹಾಳಾಗುತ್ತಿರುವ ವೇಳೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.