ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಚುನಾವಣೆ: ಎಐಎಡಿಎಂಕೆಯ 171 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿಜೆಪಿ, ಪಿಎಂಕೆ ಸ್ಥಾನಗಳ ಗುರುತು
Last Updated 10 ಮಾರ್ಚ್ 2021, 14:01 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ವಿಧಾನಸಭಾ ಸ್ಥಾನಗಳಿಗೆ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಿಎಂಕೆ ಮತ್ತು ಬಿಜೆಪಿಯು ಸ್ಪರ್ಧಿಸಲಿರುವ ಸ್ಥಾನಗಳನ್ನು ಗುರುತು ಮಾಡಲಾಗಿದೆ.

ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾಗಿದ್ದ ಆರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 177 ಸ್ಥಾನಗಳಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. 43 ಸ್ಥಾನಗಳಲ್ಲಿ ಮೈತ್ರಿ ಪಕ್ಷಗಳು ಸ್ಪರ್ಧಿಸಲಿದ್ದು, ಉಳಿದ 14 ಸ್ಥಾನಗಳು ಹಂಚಿಕೆಯಾಗಬೇಕಿದೆ.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್‌ 6ರಂದು ಚುನಾವಣೆ ನಡೆಯಲಿದೆ.

ವಿಧಾನಸಭಾಧ್ಯಕ್ಷ ಪಿ.ಧನಪಾಲ್‌, ಸಚಿವರಾದ ಎಸ್‌.ಪಿ.ವೇಲುಮಣಿ, ಪಿ.ಥಂಗಮಣಿ ಹಾಗೂ ಮಾಜಿ ಸಚಿವರಾದ ಬಿ.ವಿ.ರಮಣ ಹಾಗೂ ಟಿಕೆಎಂ ಚಿನ್ನಯ್ಯ ಸೇರಿದಂತೆ ಹಲವು ಪ್ರಮುಖರು ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಿಎಂಕೆ ಪಕ್ಷವು ಉತ್ತರ ತಮಿಳುನಾಡಿನ ಜಿಂಜಿ, ಮೈಲಮ್‌, ವಂಡವಾಸಿ (ಮೀಸಲು ಕ್ಷೇತ್ರ), ಆರ್ಕಾಟ್‌, ಗುಮ್ಮಿಡಿಪೂಂಡಿ, ಕಾಂಚೀಪುರಂ ಜೊತೆಗೆ ಇತರೆ 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿಯು ಕನ್ಯಾಕುಮಾರಿಯ ನಾಗರ್‌ಕೋಯಿಲ್‌, ಕೊಲಚೆಲ್‌, ವಿಲವನ್‌ಕೋಡ್‌ ಕ್ಷೇತ್ರಗಳು ಹಾಗೂ ತಿರುವಣ್ಣಾಮಲೈ, ದಕ್ಷಿಣ ಕೊಯಮತ್ತೂರು ಸೇರಿದಂತೆ ಒಟ್ಟು 20 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT