ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಜನರಿಗೆ ಸಿಹಿಸುದ್ದಿ: ಪೊಂಗಲ್ ಹಬ್ಬಕ್ಕೆ ನಗದು ಉಡುಗೊರೆ ಘೋಷಿಸಿದ ಸಿಎಂ

Published 5 ಜನವರಿ 2024, 12:37 IST
Last Updated 5 ಜನವರಿ 2024, 12:37 IST
ಅಕ್ಷರ ಗಾತ್ರ

ಚೆನ್ನೈ: ಪೊಂಗಲ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ಜನರಿಗೆ ₹1,000 ನಗದು ಉಡುಗೊರೆಯನ್ನು ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ.

ಜನವರಿ 15 ರಂದು ಪೊಂಗಲ್ ಆಚರಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ ಎಲ್ಲಾ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ 'ಪೊಂಗಲ್ ಉಡುಗೊರೆ'ಯಾಗಿ ಸಾವಿರ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿಯನ್ನು ಉಲ್ಲೇಖಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಕಬ್ಬು, ತಲಾ ಒಂದು ಕೆ.ಜಿ ಅಕ್ಕಿ ಹಾಗೂ ಸಕ್ಕರೆಯನ್ನು ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ಅನ್ನು ಸರ್ಕಾರ ಈಗಾಗಲೇ ಘೋಷಿಸಿದೆ. ಪೊಂಗಲ್ ಗಿಫ್ಟ್ ಹ್ಯಾಂಪರ್ ಜತೆಗೆ ಉಚಿತ ಧೋತಿ ಮತ್ತು ಸೀರೆಗಳನ್ನು ಸಹ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇದಲ್ಲದೇ 'ಕಲೈನರ್‌ ಮಗಳಿರ್ ಉರಿಮೈ ತಿಟ್ಟಂ'(Kalaignar Magalir Urimai Thittam) ಯೋಜನೆಯಡಿ ಮಾಸಿಕವಾಗಿ ನೀಡಲಾಗುವ ₹1,000 ಅನ್ನು ಪೊಂಗಲ್ ಹಬ್ಬದ ಐದು ದಿನಗಳ ಮೊದಲು ಅಂದರೆ ಜನವರಿ 10 ರಂದು ಪಾವತಿಸಲಾಗುವುದು. ಮೊತ್ತವನ್ನು ಫಲಾನುಭವಿಗಳ ಆಯಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದರಿಂದ ಕುಟುಂಬದ 1.15 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT