ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ 'ಜನ ವಿಶ್ವಾಸ ಯಾತ್ರೆ': ಜನರ ಪರವಾಗಿ ಇರುತ್ತೇನೆ– ತೇಜಸ್ವಿ ಯಾದವ್

Published 20 ಫೆಬ್ರುವರಿ 2024, 6:14 IST
Last Updated 20 ಫೆಬ್ರುವರಿ 2024, 6:14 IST
ಅಕ್ಷರ ಗಾತ್ರ

ಪಟ್ನಾ: ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಮಂಗಳವಾರದಿಂದ 11 ದಿನಗಳ ಕಾಲ ಬಿಹಾರದಾದ್ಯಂತ ‘ಜನ ವಿಶ್ವಾಸ ಯಾತ್ರೆ'ಯನ್ನು ಆರಂಭಿಸಿದ್ದಾರೆ. 

ಈ ಅವಧಿಯಲ್ಲಿ ಅವರು ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲೂ ಯಾತ್ರೆ ನಡೆಸಲಿದ್ದಾರೆ. 

ಇತ್ತೀಚೆಗಷ್ಟೆ ನಡೆದ ರಾಜಕೀಯ ಬದಲಾವಣೆಗಳಲ್ಲಿ ಜೆಡಿಯು ಮಹಾಘಟಬಂಧನದಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟ ಸೇರಿದ್ದರಿಂದ ತೇಜಸ್ವಿ ಯಾದವ್‌ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಈ ಹಿನ್ನಲೆಯಲ್ಲಿ ಅವರು ಜನರಿಂದ ಮತ್ತೆ ವಿಶ್ವಾಸ ಪಡೆಯಲು ‘ಜನ ವಿಶ್ವಾಸ ಯಾತ್ರೆ‘ ನಡೆಸುತ್ತಿದ್ದಾರೆ.

ಮುರ್ಜಾಫುರದಿಂದ ಇಂದು ಯಾತ್ರೆ ಆರಂಭವಾಯಿತು.  

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಏನು ಮಾಡುತ್ತಾರೆ ಎಂಬುದು ನಮಗೆ ಮುಖ್ಯವಲ್ಲ, ನಾವು ಈ ಯಾತ್ರೆಯ ಮೂಲಕ ಜನತೆಯ ವಿಶ್ವಾಸಗಳಿಸುತ್ತೇವೆ. ಏನೇ ಆಗಲಿ ನಾವು ಜನರ ಪರವಾಗಿ ಇರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ. 

ವಿಧಾನಸಭೆಯನ್ನು ವಿಸರ್ಜನೆ ಮಾಡಿ, ಲೋಕಸಭೆ ಚುನಾವಣೆ ಸಮಯದಲ್ಲೇ ವಿಧಾನಸಭೆಗೂ ಚುನಾವಣೆ ನಡೆಸಿದರೇ ಪಕ್ಷಕ್ಕೆ ಲಾಭವಾಗಬಹುದು ಎಂದು ಆರ್‌ಜೆಡಿಯ ಕೆಲವು ನಾಯಕರು ಹೇಳುತ್ತಿದ್ದಾರೆ ಎನ್ನಲಾಗಿದೆ. ಇದರೆ ಭಾಗವಾಗಿ ಜನ ವಿಶ್ವಾಸ ಯಾತ್ರೆಗೆ ತೇಜಸ್ವಿ ಯಾದವ್‌ ಕೈಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಬಿಹಾರ ವಿಧಾನಸಭೆಯು 2025ರ ಅಂತ್ಯದ ವೇಳೆಗೆ ಕೊನೆಗೊಳ್ಳುತ್ತದೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿಯು ಕೇವಲ 45 ಸದಸ್ಯರನ್ನು ಹೊಂದಿದೆ. ಬಿಜೆಪಿ 77, ಆರ್‌ಜೆಡಿ 79 ಸ್ಥಾನಗಳನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT