ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿಗೆ ಚಿನ್ನದ ಜರಿಯ ಸೀರೆ ನೀಡಿದ ತೆಲಂಗಾಣದ ಭಕ್ತ

Last Updated 10 ಏಪ್ರಿಲ್ 2023, 14:47 IST
ಅಕ್ಷರ ಗಾತ್ರ

ತಿರುಪತಿ: ತೆಲಂಗಾಣದ ಭಕ್ತರೊಬ್ಬರು ಚಿನ್ನದ ಜರಿ ಇರುವುದು ಸೇರಿ ಎರಡು ವಿಶಿಷ್ಟ ಸೀರೆಗಳನ್ನು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಮತ್ತು ತಿರುಚನೂರು ಪದ್ಮಾವತಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಪೊಟ್ಟಣದಲ್ಲಿ ಮಡಚಿಡಬಹುದಾದ ಈ ಸೀರೆಗಳನ್ನು ನಲ್ಲ ವಿಜಯ್‌ ಅವರು ಆಂಧ್ರಪ್ರದೇಶದ ಮುಖ್ಯಕಾರ್ಯದರ್ಶಿ ಕೆ.ಎಸ್‌.ಜವಾಹರ್‌ ರೆಡ್ಡಿ ಮೂಲಕ ದೇಗುಲದ ಆಡಳಿತ ಮಂಡಳಿಗೆ (ಟಿಟಿಡಿ) ಹಸ್ತಾಂತರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ಸೀರೆಯ ಬೆಲೆ ₹45,000 ಆಗಿದ್ದರೆ, ಅಮ್ಮನವರಿಗೆ ನೀಡಿರುವ ಸೀರೆಯ ಜರಿಯಲ್ಲಿ 5 ಗ್ರಾಂ ಚಿನ್ನ ಇದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT