ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಕ ಪ್ರೊ. ಕೇಶವ್ ರಾವ್ ಜಾಧವ್ ನಿಧನ

Last Updated 19 ಜೂನ್ 2018, 17:45 IST
ಅಕ್ಷರ ಗಾತ್ರ

ಹೈದರಾಬಾದ್:ಹಿರಿಯ ಸಮಾಜವಾದಿ ನಾಯಕ, ಚಿಂತಕ ಪ್ರೊ. ಕೇಶವ್ ರಾವ್ ಜಾಧವ್ (86) ಇತ್ತೀಚೆಗೆ ನಿಧನರಾದರು.

ಸಮಾಜವಾದಿ ಜನಪರಿಷದ್‌ನ ಸಂಸ್ಥಾಪಕ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಅವರು, ಹೃದಯಾಘಾತದಿಂದ ಸಾವಿಗೀಡಾದರು. ಆಂಧ್ರಪ್ರದೇಶದಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸಾಹಿತ್ಯ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು, ಅಕಾಡೆಮಿಕ್‌ ಸ್ಟಾಫ್‌ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿದ್ದರು.ಲೇಖಕರಾಗಿ, ಸಂಘಟಕರಾಗಿ, ಕವಿಯಾಗಿ ಗುರುತಿಸಿಕೊಂಡಿದ್ದರು. ತೆಲುಗು, ಹಿಂದಿ, ಉರ್ದುವಿನಲ್ಲಿ ಕವನಗಳನ್ನು ರಚಿಸಿದ್ದರು. ತೆಲಂಗಾಣ ರಾಜ್ಯನಿರ್ಮಾಣಕ್ಕಾಗಿ ಹೋರಾಟ ಮಾಡಿದ ಪ್ರಮುಖರಲ್ಲಿ ಜಾಧವ್‌ ಅವರೂ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT