ಹೈದರಾಬಾದ್: ಕೇವಲ ₹22 ಸಾಲ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮೇಡಕ್ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ದಿನಗೂಲಿ ಕೆಲಸಕ್ಕಾಗಿ ಮೊಹಮ್ಮದ್ ಸಿರಾಜ್ ಮತ್ತು ಮಹೇಶ್ ಉತ್ತರ ಪ್ರದೇಶದಿಂದ ಮೇಡಕ್ಗೆ ವಲಸೆ ಬಂದಿದ್ದರು. ಇಬ್ಬರು ರವಿ ಕುಮಾರ್ ಎಂಬ ವ್ಯಕ್ತಿಯೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಸಿರಾಜ್, ಮಹೇಶ್ ಮದ್ಯ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಕರ ಸಂಕ್ರಾತಿಯಂದು ಮರದ ಕೆಳಗೆ ಕುಳಿತು ಮದ್ಯ ಸೇವಿಸುವಾಗ ಮಹೇಶ್ ತನ್ನ ₹22 ಹಣವನ್ನು ಹಿಂದಿರುಗಿಸುವಂತೆ ಸಿರಾಜ್ಗೆ ಒತ್ತಾಯ ಮಾಡಿದ್ದಾನೆ. ಬಳಿಕ, ಅದು ವಿವಾದಕ್ಕೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿದ್ದ ಮಹೇಶ್, ಸಿರಾಜ್ನ ತಲೆಯನ್ನು ಮರಕ್ಕೆ ಬಡಿದು, ಹತ್ತರವಿದ್ದ ಕಲ್ಲಿನಿಂದ ಮಹೇಶ್ ತಲೆಗೆ ಹೊಡೆದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.