ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಿಯಲ್ಲಿ ಕುಸಿದ ತಾಪಮಾನ: ಜನ ತತ್ತರ

Published 18 ಜನವರಿ 2024, 13:33 IST
Last Updated 18 ಜನವರಿ 2024, 13:33 IST
ಅಕ್ಷರ ಗಾತ್ರ

ಉದಕಮಂಡಲ(ಊಟಿ): ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಊಟಿಯಲ್ಲಿ ತಾಪಮಾನವು ಭಾರಿ ಇಳಿಕೆಯಾಗಿದ್ದು, ದಿಢೀರ್‌ ಹವಾಮಾನ ಬದಲಾವಣೆಯಿಂದಾಗಿ ಜನರು ತತ್ತರಿಸಿದ್ದಾರೆ. 

ಎಲ್ಲಿ ನೋಡಿದರೂ ದಟ್ಟವಾದ ಮಂಜು ಆವರಿಸಿದ್ದು, ವಿಪರೀತ ಚಳಿಯಿಂದಾಗಿ ಸ್ಥಳೀಯರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಈ ಅಕಾಲಿಕ ಚಳಿ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.

ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಈ ರೀತಿಯ ವಾತಾವರಣವು ಕಂಡುಬರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಲ್ಲಿನ ಕಾಂತಲ್, ತಲೈಕುಂಠ ಪ್ರದೇಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ಸಾಂದಿನಲ್ಲ, ಬೊಟಾನಿಕಲ್ ಗಾರ್ಡನ್‌ ಪ್ರದೇಶಗಳಲ್ಲೂ ತಾಪಮಾನ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT