ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಸಂಬಂಧವಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ: ಕೊಲೆ ಆರೋಪಿ ಹೇಳಿಕೆ

Published 9 ಜೂನ್ 2023, 10:31 IST
Last Updated 9 ಜೂನ್ 2023, 10:31 IST
ಅಕ್ಷರ ಗಾತ್ರ

ಠಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ ಸಹಜೀವನ ಸಂಗಾತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 56 ವರ್ಷದ ವ್ಯಕ್ತಿ ತಾನು ಎಚ್ಐವಿ-ಪಾಸಿಟಿವ್ ಎಂದು ಪೊಲೀಸರಿಗೆ ಹೇಳಿದ್ದಾನೆ. ಮೃತ 32 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾನೆ.

ತನ್ನ ಸಹಜೀವನ ಸಂಗಾತಿಯಾಗಿದ್ದ ಸರಸ್ವತಿ ವೈದ್ಯ ಅವರು ಜೂನ್‌ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಆಕೆಯ ದೇಹವನ್ನು ತಾನೇ ವಿಲೇವಾರಿ ಮಾಡಲು ಮುಂದಾಗಿದ್ದಾಗಿ ಅರೋಪಿ ಮನೋಜ್‌ ಸಾನೆ ತಿಳಿಸಿದ್ದಾನೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

‘2008 ರಲ್ಲಿ ತನಗೆ ಎಚ್ಐವಿ ಇರುವುದು ಪತ್ತೆಯಾಗಿತ್ತು ಎಂದು ಸಾನೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸರಸ್ವತಿ ವೈದ್ಯ ನನ್ನ ಮೇಲೆ ಸದಾ ಅನುಮಾನಪಡುತ್ತಿದ್ದಳು. ತಡವಾಗಿ ಮನೆಗೆ ಬಂದಾಗೆಲ್ಲವೂ ನನ್ನನ್ನು ವಿಶ್ವಾಸದ್ರೋಹಿ ಎಂದು ನಿಂದಿಸುತ್ತಿದ್ದಳು. ಆಕೆ 10 ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಚಿಂತಿಸಿದ್ದಳು. ನಾನೇ ಗಣಿತ ಪಾಠ ಮಾಡುತ್ತಿದ್ದೆ’ ಎಂದು ಮನೋಜ್‌ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT