ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ : ಪಿಎಫ್‌ಐನ ಮೂವರು ಕಾರ್ಯಕರ್ತರ ಬಂಧನ

Last Updated 7 ಜುಲೈ 2022, 14:54 IST
ಅಕ್ಷರ ಗಾತ್ರ

ನಿಜಾಮಾಬಾದ್‌, ತೆಲಂಗಾಣ (ಪಿಟಿಐ): ಧಾರ್ಮಿಕ ದ್ವೇಷವನ್ನು ‍ಬಿತ್ತಲು ಪ್ರಯತ್ನಿಸುತ್ತಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಮೂವರು ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಇತ್ತೀಚೆಗೆ ಬಂಧಿಸಲಾಗಿದ್ದ 52 ವರ್ಷದ ವ್ಯಕ್ತಿಯ ಪ್ರಕರಣದ ಮುಂದುವರಿದ ಭಾಗವಾಗಿ, ಈ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಮೂವರು ಯುವಕರಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡುತ್ತಿದ್ದರು’ ಎಂದು ನಿಜಾಮಾಬಾದ್‌ನ ಪೊಲೀಸ್‌ ಕಮಿಷನರ್‌ ಕೆ. ಆರ್‌. ನಾಗರಾಜು ಹೇಳಿದರು. ‌

‘ಸದ್ಯ ಬಂಧಿತ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದೂ ಅವರು ಹೇಳಿದರು.

‘ಬಂಧಿತ ಕಾರ್ಯಕರ್ತರಲ್ಲಿ ಒಬ್ಬಾತ 2017 ರಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ್ದ. ಬಳಿಕ ಉಳಿದಿಬ್ಬರೂ ಸಂಘಟನೆಗೆ ಸೇರಿದ್ದರು. ಈ ಮೂವರು ಕರಾಟೆ ತರಬೇತುದಾರರಾಗಿದ್ದ 52 ವರ್ಷದ ವ್ಯಕ್ತಿಗೆ ಮನೆ ನಿರ್ಮಾಣಕ್ಕಾಗಿ 6 ಲಕ್ಷ ರೂಪಾಯಿ ಪಾವತಿಸಿದ್ದರು.’

‘ಕಾನೂನು ಅರಿವು ಮತ್ತು ಕರಾಟೆ ತರಗತಿಗಳ ಮಾದರಿಯಲ್ಲಿ ತರಬೇತಿ ಶಿಬಿರ ನಡೆಸುವ ನೆಪದಲ್ಲಿ ಕಳೆದ ಆರು ತಿಂಗಳಿಂದ ಅಮಾಯಕ ಯುವಕರನ್ನು ಸಮಾಜಘಾತುಕ ಚಟುವಟಿಕೆಗಳಿಗೆ ಆರೋಪಿಗಳು ಪ್ರೇರೇಪಿಸುತ್ತಿದ್ದರು. ಅಲ್ಲದೇ ಮಾರಕಾಸ್ತ್ರಗಳನ್ನು ಬಳಸುತ್ತಿದ್ದರು’ ಎಂದು ಪೊಲೀಸರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT