ನವದೆಹಲಿ: ತಮಿಳು ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸದ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಚಿತ್ರ ಪ್ರದರ್ಶನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ ಎಂದು ಹೇಳಿದೆ.

‘ಜನ ಗುಂಪು ಗುಂಪಾಗಿ ಬೀದಿಗಿಳಿದು ಚಿತ್ರಮಂದಿರಗಳ ಮಾಲೀಕರಿಗೆ ಗನ್ ತೋರಿಸಿ ಚಿತ್ರ ಪ್ರದರ್ಶಿಸದಂತೆ ಬೆದರಿಕೆ ಒಡ್ಡುವುದಕ್ಕೆ ಅವಕಾಶ ಕಲ್ಪಿಸಲಾಗದು. ನೆಲದ ಕಾನೂನು ಪಾಲನೆಯಾಗಬೇಕು’ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಯಾರಾದರೂ ಏನಾದರೂ ಮೌಖಿಕ ಹೇಳಿಕೆ ನೀಡಿದ್ದರೆ, ಅದಕ್ಕೆ ಹೇಳಿಕೆಯಿಂದಲೇ ಪ್ರತ್ಯುತ್ತರ ನೀಡಿ. ಯಾರಾದರೂ ಏನಾದರೂ ಬರೆದಿದ್ದರೆ, ಬರಹ ರೂಪದಲ್ಲೇ ಅದಕ್ಕೆ ಪ್ರತ್ಯುತ್ತರ ನೀಡಿ. ಆದರೆ, ಹೀಗೆ ನಿಷೇಧದ ಸನ್ನಿವೇಶ ಸೃಷ್ಟಿಸಲು ಅವಕಾಶ ಇಲ್ಲ’ ಎಂದು ಕರ್ನಾಟಕ ಸರ್ಕಾರದ ಪರ ವಕೀಲರಿಗೆ ನ್ಯಾಯಮೂರ್ತಿ ಭುಯಾನ್ ಸೂಚಿಸಿದರು. ಈ ವಿಷಯದ ಬಗ್ಗೆ ಜೂನ್ 18ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿದರು.

‘ಚಲನಚಿತ್ರ ಪ್ರದರ್ಶನಗೊಂಡಾಗ ಜನರು ಅದನ್ನು ವೀಕ್ಷಿಸದೇ ಇರಬಹುದು. ಆದರೆ, ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆಯನ್ನು ಹಾಕಲಾಗದು’ ಎಂದೂ ಪೀಠ ಅಭಿಪ್ರಾಯಪಟ್ಟಿತು.

ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿರುವ ಅರ್ಜಿದಾರ ಎಂ.ಮಹೇಶ್ ರೆಡ್ಡಿ ಪರವಾಗಿ ಹಾಜರಾದ ವಕೀಲ ಎ.ವೇಲಂ, ‘ಅಂತಹ ಬೆದರಿಕೆ ಒಡ್ಡುವವರ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲಿಸಿಲ್ಲ’ ಎಂದು ಪೀಠದ ಗಮನಕ್ಕೆ ತಂದರು.

ಆಗ ನ್ಯಾಯಮೂರ್ತಿ ಮನಮೋಹನ್, ‘ಕಾನೂನಿನ ಪ್ರಕಾರ ಸಿಬಿಎಫ್ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಬಹುದು ಮತ್ತು ಅದರ ಪ್ರದರ್ಶನವನ್ನು ರಾಜ್ಯಗಳು ಖಾತರಿಪಡಿಸಬೇಕು. ನೀವು ಜನರ ತಲೆಗೆ ಬಂದೂಕು ಹಿಡಿದು ಚಿತ್ರ ಪ್ರದರ್ಶನ ಮಾಡದಂತೆ ಹೇಳಲಾಗದು’ ಎಂದರು.

ಕರ್ನಾಟಕ ಸರ್ಕಾರದ ವಕೀಲರು, ‘ಚಿತ್ರ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯು ಕರ್ನಾಟಕ ಹೈಕೋರ್ಟ್ ಮುಂದೆ ಜೂನ್ 20ರಂದು ವಿಚಾರಣೆಗೆ ಬರಲಿದೆ’ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು. ಆಗ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ ಮುಂದೆ ಬಾಕಿ ಇರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ವರ್ಗಾಯಿಸುವಂತೆ ಸೂಚನೆ ನೀಡಿತು.

ರಾಜ್ಯ ಸರ್ಕಾರದ ಪರ ವಕೀಲರು, ‘ಕರ್ನಾಟಕ ಚಲನಚಿತ್ರ ಮಂಡಳಿಯೊಂದಿಗಿನ ಸಮಸ್ಯೆಯನ್ನು ಕಮಲ್ ಹಾಸನ್ ಅವರು ಬಗೆಹರಿಸಿಕೊಳ್ಳುವವರೆಗೆ ಚಿತ್ರ ಬಿಡುಗಡೆಗೊಳಿಸದಿರುವ ಆಯ್ಕೆ ಚಿತ್ರ ನಿರ್ಮಾಪಕರಾಗಿತ್ತು’ ಎಂಬ ವಿಷಯವನ್ನು ಪೀಠದ ಮುಂದಿಟ್ಟರು. ಆಗ ನ್ಯಾಯಪೀಠ, ‘ಜನರು ವಿಭಿನ್ನ ಅಭಿಪ್ರಾಯ ಹಾಗೂ ದೃಷ್ಟಿಕೋನ ಹೊಂದಿರುತ್ತಾರೆ. ಆದರೆ, ಆ ಕಾರಣಕ್ಕಾಗಿ ಚಿತ್ರವೊಂದು ಪ್ರದರ್ಶನಗೊಳ್ಳುವುದನ್ನು ತಡೆಯಲಾಗದು’ ಎಂದು ಹೇಳಿತು.

ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ಜೂನ್ 19ರಂದು ಮುಂದುವರಿಸಲಿದೆ.

‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂಬ ಕಮಲ್ ಹಾಸನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕಮಲ್ ಕ್ಷಮೆಯಾಚಿಸಬೇಕೆಂಬ ಒತ್ತಾಯವೂ ಬಲವಾಗಿತ್ತು. ‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು.

ಈ ಮಧ್ಯೆ, ಹೈಕೋರ್ಟ್ ಮೊರೆ ಹೋಗಿದ್ದ ರಾಜ್ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ. ನಾರಾಯಣನ್, ‘ಸಿನಿಮಾ ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕನ್ನಡ, ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು ನೀವೇನು ಇತಿಹಾಸಕಾರರೇ ಅಥವಾ ಭಾಷಾ ತಜ್ಞರೇ’ ಎಂದೂ ಪ್ರಶ್ನಿಸಿತ್ತು. ‘ಕನ್ನಡಿಗರನ್ನು ಕೆಣಕಿರುವ ನೀವೀಗ ಅವರ ಕ್ಷಮೆ ಕೇಳಲು ಯಾಕೆ ಹಿಂಜರಿಯುತ್ತಿದ್ದೀರಿ’ ಎಂದೂ ಪ್ರಶ್ನಿಸಿತ್ತು.
.ನಟ ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ಲವೇ? ಕರ್ನಾಟಕ ಹೈಕೋರ್ಟ್ ಪ್ರಶ್ನೆ.ಕಮಲ್ ಹಾಸನ್ ಚಿತ್ರ ಪ್ರದರ್ಶನ ‘ನಿಷೇಧ’ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ PIL.ಕಮಲ್ ಹಾಸನ್ ವಿಷಾದ ವ್ಯಕ್ತಪಡಿಸಬೇಕು: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ .‘ಥಗ್ ಲೈಫ್’ಗೆ ಕರ್ನಾಟಕದಲ್ಲಿ ವಿರೋಧ: ವಿಜಯ್ ಹೊಸ ಸಿನಿಮಾಕ್ಕೂ ಸಂಕಷ್ಟ..?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.