ಚೆನ್ನೈ: ನಟ ವಿಜಯ್ ದಳಪತಿ ಅವರು ರಾಜಕೀಯಕ್ಕೆ ಸಂಪೂರ್ಣವಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿರುವ ಹೊತ್ತಿನಲ್ಲೇ ಅವರು ನಟಿಸಿರುವ ‘ಜನ ನಾಯಗನ್’ಗೆ ಸಂಕಷ್ಟ ಎದುರಾಗಿದೆ.

ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಬೆಂಗಳೂರಿನ ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿರುವ ವಿಜಯ್ ಸಿನಿಮಾ ಬಿಡುಗಡೆಗೂ ತಡೆಯೊಡ್ಡಲಾಗುವುದು ಎಂದು ಹಲವು ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿವೆ.

ವೆಂಕಟ್ ಕೆ. ನಾರಾಯಣ ಹಾಗೂ ನಿಶಾ ವೆಂಕಟ್ ಕೊನಾಕಿ ಅವರ ಪ್ರೊಡಕ್ಷನ್ ಸಂಸ್ಥೆಯು ತಮಿಳು ಭಾಷೆಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ ‘ಜಯ ನಾಯಗನ್’ ಸಿನಿಮಾವು ‘ಪೊಂಗಲ್ ಹಬ್ಬ’ದ ಮುನ್ನ 2026ರ ಜನವರಿ 9ರಂದು ಬಿಡುಗಡೆಯಾಗಲಿದೆ. ಜೂನ್ 5ರಂದು ಬಿಡುಗಡೆಯಾಗಬೇಕಿರುವ ‘ಥಗ್ ಲೈಫ್’ ಸಿನಿಮಾಕ್ಕೆ ತೊಂದರೆಯಾದರೆ, ಅವರ ಸಿನಿಮಾವು ನಿಷೇಧದ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.