ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮಿಲಿಂದ್ ರಾಜೀನಾಮೆ | ಪ್ರಧಾನಿ ಅವರಿಂದ ನಿರ್ಧಾರ: ಜೈರಾಮ್ ರಮೇಶ್

Published 14 ಜನವರಿ 2024, 5:40 IST
Last Updated 14 ಜನವರಿ 2024, 5:40 IST
ಅಕ್ಷರ ಗಾತ್ರ

ಇಂಫಾಲ: ಮಾಜಿ ಸಂಸದ ಮಿಲಿಂದ್ ದಿಯೋರಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಂದು ಮಣಿಪುರದಲ್ಲಿ 'ಭಾರತ್ ಜೋಡೊ ನ್ಯಾಯ ಯಾತ್ರೆ' ಆರಂಭಿಸುವ ಅದೇ ಹೊತ್ತಿನಲ್ಲಿ ಮಿಲಿಂದ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.

ಮಿಲಿಂದ್ ಅವರು ರಾಜೀನಾಮೆ ಘೋಷಣೆಯ ಸಮಯವನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಮಿಲಿಂದ್ ಅವರು ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದರು. ಶಿವಸೇನಾಗೆ ಸೀಟು ನೀಡುವ ಸಂಬಂಧ ದಿಯೋರಾ ಅಸಮಾಧಾನ ಹೊಂದಿದ್ದರು. ರಾಹುಲ್ ಗಾಂಧಿಯನ್ನು ಭೇಟಿಯಾಗಲು ಬಯಸಿದ್ದರು ಎಂದು ರಮೇಶ್ ಹೇಳಿದ್ದಾರೆ.

ನಿಸ್ಸಂಶವಾಗಿಯೂ ಇವೆಲ್ಲವೂ ಪ್ರಹಸನ ಮಾತ್ರವಾಗಿತ್ತು. ಪಕ್ಷ ತೊರೆಯಲು ಮಿಲಿಂದ್ ಮೊದಲೇ ನಿರ್ಧರಿಸಿದ್ದರು. ರಾಜೀನಾಮೆ ಘೋಷಣೆಯ ಸಮಯವನ್ನು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT