ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಸಮಿತಿ ಸಲ್ಲಿಸಿದ ತನಿಖಾ ವರದಿಯನ್ನು ತಿರಸ್ಕರಿಸಿರುವ ವೈಎಸ್ಆರ್ಸಿಪಿ ಹಿರಿಯ ನಾಯಕ ಮತ್ತು ಟಿಟಿಡಿಯ ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ, ವರದಿಯು ಪಕ್ಷಪಾತ ಮತ್ತು ಪೂರ್ವನಿರ್ಧರಿತವಾಗಿರುವಂತೆ ಕಾಣುತ್ತಿದ್ದು ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಈ ವರ್ಷದ ಜನವರಿ 8ರಂದು ತಿರುಪತಿಯ ಬೈರಾಗಿಪಟ್ಟೆದ ಬಳಿಯ ಪದ್ಮಾವತಿ ಪಾರ್ಕ್ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿ ನ್ಯಾಯಮೂರ್ತಿ (ನಿವೃತ್ತ) ಎಂ. ಸತ್ಯನಾರಾಯಣ ಮೂರ್ತಿ ಅವರು ಸಲ್ಲಿಸಿದ್ದ ವರದಿಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸಂಪುಟ ಒಪ್ಪಿಕೊಂಡಿದೆ.

ಘಟನೆಯಲ್ಲಿ ಆರು ಭಕ್ತರು ಮೃತಪಟ್ಟು ಸುಮಾರು 40 ಮಂದಿ ಗಾಯಗೊಂಡಿದ್ದರು.

‘ಟಿಟಿಡಿ, ಕಂದಾಯ (ಇಲಾಖೆ) ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಘಟನೆಯ ಹೊಣೆ ಹೊತ್ತುಕೊಳ್ಳಬೇಕಾದ ಎಲ್ಲಾ ಪ್ರಮುಖ ವ್ಯಕ್ತಿಗಳ ಹೆಸರನ್ನು ಕೈಬಿಡಲಾಗಿದ್ದು, ವರದಿಯು ಪೂರ್ವನಿರ್ಧರಿತವಾಗಿ ಕಾಣುತ್ತಿದೆ, ಆದರೆ ಆಯ್ದ ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ’ ಎಂದು ರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ವರದಿಯ ಪ್ರಕಾರ ಹರಿನಾಥ ರೆಡ್ಡಿ ಮತ್ತು ರಮಣ ಕುಮಾರ್ ಇಬ್ಬರನ್ನು ಕಾಲ್ತುಳಿತಕ್ಕೆ ಹೊಣೆ ಮಾಡಲಾಗಿದೆ. ವಿವಿಧ ವಿಚಕ್ಷಣ ದಳ ಮತ್ತು ಹಲವು ಆಯೋಗಗಳ ವರದಿಗಳನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು. ಘಟನೆಯ ಹೊಣೆ ಹೊತ್ತುಕೊಳ್ಳಬೇಕಾದ ವ್ಯಕ್ತಿಯನ್ನು ಕೈಬಿಟ್ಟಿದ್ದಾರೆ. ಅರೆಕಾಲಿಕ ಸಿಬ್ಬಂದಿಯನ್ನು ಹೊಣೆ ಮಾಡಿದ್ದು. ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಕೆಳ ಹಂತದ ಅಧಿಕಾರಿಗಳನ್ನು ಬಲಿಪಶು ಮಾಡುವುದೇ ವರದಿಯ ಉದ್ದೇಶವಾಗಿದೆ ಎಂದು ಆರೋಪಿಸಿದರು.
.ತಿರುಪತಿ ಕಾಲ್ತುಳಿತ ಪ್ರಕರಣ: ನ್ಯಾಯಾಂಗ ತನಿಖೆಗೆ ಆಂಧ್ರ ಸರ್ಕಾರ ಆದೇಶ.ತಿರುಪತಿ ಕಾಲ್ತುಳಿತ; ಗಾಯಗೊಂಡವರಿಗೆ ತಿಮ್ಮಪ್ಪನ ವಿಶೇಷ ದರ್ಶನ: ಟಿಟಿಡಿ.Video | Tirupati Stampede: ತಿರುಪತಿ ದೇಗುಲದಲ್ಲಿ ಕಾಲ್ತುಳಿತ; ಆರು ಮಂದಿ ಸಾವು.ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತ! TTD ಅಧ್ಯಕ್ಷರು ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.