ಚೆನ್ನೈ: ಏಕತೆ ಮತ್ತು ಕೋಮು ಸೌಹಾರ್ದತೆಯನ್ನು ರಕ್ಷಿಸಲು ಹಾಗೂ ಸಂವಿಧಾನದಲ್ಲಿ ನೀಡಲಾಗಿರುವ ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯಲು ಪೌರತ್ವ (ತಿದ್ದುಪಡಿ) ಕಾಯ್ದೆ–2019 ರದ್ದುಗೊಳಿಸುವಂತೆ ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯು ಬುಧವಾರ ಅಂಗೀಕರಿಸಿದೆ.

‘ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸಿದರು.

‘ಪ್ರಜಾಪ್ರಭುತ್ವ ತತ್ವಗಳಿಗನುಸಾರ ಸಮಾಜದ ಎಲ್ಲಾ ವರ್ಗಗಳ ಆಕಾಂಕ್ಷೆಗಳು ಮತ್ತು ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಆಡಳಿತ ನಡೆಸಬೇಕು. ಆದರೆ, ಈ ಕಾಯ್ದೆಯು ನಿರಾಶ್ರಿತರ ಸಂಕಷ್ಟವನ್ನು ಪರಿಗಣಿಸಿ ಬೆಂಬಲವನ್ನು ನೀಡುವ ಬದಲು ನಿರ್ದಿಷ್ಟ ಧರ್ಮ ಮತ್ತು ದೇಶದ ವ್ಯಕ್ತಿಗಳೊಂದಿಗೆ ತಾರತಮ್ಯ ಮಾಡುತ್ತಿದೆ’ ಎಂದು ಸ್ಟಾಲಿನ್ ಹೇಳಿದರು.

ಈ ನಿರ್ಣಯದ ಅಂಗೀಕಾರದ ವೇಳೆ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಸದಸ್ಯರು ಸದನದಲ್ಲಿ ಇರಲಿಲ್ಲ. ಅಧಿವೇಶನದ ಶೂನ್ಯ ಅವಧಿಯಲ್ಲಿ ಕೆಲವು ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಎಐಎಡಿಎಂಕೆ ಸದಸ್ಯರು ಸಭೆಯಿಂದ ಹೊರ ಹೋಗಿದ್ದರು.

ಸಿಎಎ ಕಾಯ್ದೆಯ ವಿರುದ್ಧದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಕೂಡ ಸಭಾತ್ಯಾಗ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.