ಚೆನ್ನೈ: ಹಣಕಾಸು ವಿಷಯದಲ್ಲಿ ರಾಜ್ಯಗಳು ಹೊಂದಿರುವ ಅಧಿಕಾರವನ್ನು ಸಂರಕ್ಷಣೆ ಮಾಡುವ ವಿಚಾರವಾಗಿ ಧ್ವನಿ ಎತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಸಾಲ ಪಡೆಯುವ ವಿಚಾರವಾಗಿ ರಾಜ್ಯಗಳು ಅಧಿಕಾರ ಹೊಂದಿವೆ. ಆದರೆ, ರಾಜ್ಯಗಳ ಅಧಿಕಾರದ ಮೇಲೆ ನಿರ್ಬಂಧ ಹೇರುವ ಮೂಲಕ ಸಂವಿಧಾನದ 293ನೇ ವಿಧಿ ಅನ್ವಯ ತನಗಿರುವ ಅಧಿಕಾರವನ್ನು ಕೇಂದ್ರ ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

‘ರಾಜ್ಯಗಳ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ’ ಪ್ರಕಾರ, ಸಾಲ ಪಡೆಯುವುದಕ್ಕೂ ಮುನ್ನ ರಾಜ್ಯಗಳು ಕೇಂದ್ರದ ಅನುಮತಿ ಪಡೆಯಬೇಕಿತ್ತು. ಈಗ, ಕಾಯ್ದೆಯಲ್ಲಿನ ಈ ಅವಕಾಶಗಳನ್ನು ಬದಲಾಯಿಸಲಾಗಿದ್ದು, ಈ ಅವಕಾಶವನ್ನು ರಾಜ್ಯಗಳ ಅಧಿಕಾರದ ಮೇಲೆ ನಿರ್ಬಂಧ ಹೇರುವ ಸಾಧನವನ್ನಾಗಿ ಮಾಡಲಾಗಿದೆ’ ಎಂದು ಸ್ಟಾಲಿನ್ ಅವರು ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ಕೇಂದ್ರದ ಈ ನಡೆಯಿಂದಾಗಿ, ಸಂವಿಧಾನ ನಿರ್ಮಾತೃಗಳು ರೂಪಿಸಿದ್ದ ವಿತ್ತೀಯ ಒಕ್ಕೂಟ ವ್ಯವಸ್ಥೆ ತತ್ವಕ್ಕೆ ಅಪಾಯ ಎದುರಾದಂತಾಗಿದೆ’ ಎಂದೂ ಹೇಳಿದ್ದಾರೆ.

‘ರಾಜ್ಯಗಳ ಪಾಲಿನ ಹಣವನ್ನು ಕೊಡದೇ ತಾರತಮ್ಯ ನೀತಿ ಅನುಸರಿಸುತ್ತಿರುವ ಕೇಂದ್ರದ ನಡೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುವ ನಿಮ್ಮ ಪ್ರಯತ್ನ ಶ್ಲಾಘನೀಯ’ ಎಂದೂ ಸ್ಟಾಲಿನ್ ಹೇಳಿದ್ದಾರೆ.

‘ಪಿಣರಾಯಿ ನೇತೃತ್ವದ ಧರಣಿಯಲ್ಲಿ ಡಿಎಂಕೆ ಸಂಸದರು ಭಾಗಿ’ ಪ್ರಜಾವಾಣಿ ವಾರ್ತೆ ಚೆನ್ನೈ: ತೆರಿಗೆ ಪಾಲು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ಖಂಡಿಸಿ ಕೇಂದ್ರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೆ.8ರಂದು ನವದೆಹಲಿಯಲ್ಲಿ ನಡೆಸಲಿರುವ ಧರಣಿಯಲ್ಲಿ ಡಿಎಂಕೆ ಸಂಸದರು ಪಾಲ್ಗೊಳ್ಳುವರು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ. ‘ತಮಿಳುನಾಡು ಕುರಿತು ಕೇಂದ್ರದ ತಾರತಮ್ಯ ನೀಡಿ ಖಂಡಿಸಿ ಪಕ್ಷದ ಸಂಸದರು ಕಪ್ಪು ಬಣ್ಣದ ಅಂಗಿ ಧರಿಸಿ ಪ್ರತಿಭಟಿಸುವರು. ಜೊತೆಗೆ ಕೇರಳ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲೂ ಪಾಲ್ಗೊಳ್ಳುವರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.