ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂಲ್‌ ಕಿಟ್‌ ಪ್ರಕರಣ: ಮಾ.15ರವರೆಗೆ ನಿಖಿತಾ, ಶಾಂತನು ಬಂಧಿಸದಂತೆ ಆದೇಶ

Last Updated 9 ಮಾರ್ಚ್ 2021, 13:18 IST
ಅಕ್ಷರ ಗಾತ್ರ

ನವದೆಹಲಿ: ಟೂಲ್‌ ಕಿಟ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿಖಿತಾ ಜಾಕೋಬ್ ಮತ್ತು ಶಾಂತನು ಮುಲುಕ್‌ ಅವರನ್ನು ಮಾರ್ಚ್ 15ರವರೆಗೂ ಬಂಧಿಸದಂತೆ ಅವಧಿಯನ್ನು ವಿಸ್ತರಿಸಿಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ರೈತರ ಪ್ರತಿಭಟನೆಗೆ ಕುರಿತ ಸಾಮಾಜಿಕ ಜಾಲತಾಣದ ಟೂಲ್‌ಕಿಟ್‌ ಸಂಬಂಧಿಸಿ ಪರಿಸರ ಕಾರ್ಯಕರ್ತೆ ದಿಶಾ ರವಿ ಹಾಗೂ ಈ ಇಬ್ಬರು ಆರೋಪಿಗಳಾಗಿದ್ದರು. ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಧರ್ಮೇಂದರ್ ರಾಣಾ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದು, ವಿಚಾರಣೆಯನ್ನು 15ಕ್ಕೆ ಮುಂದೂಡಿದರು.

ದೆಹಲಿಯ ಪೊಲೀಸರು ದಾಖಲಿಸಿರುವ ಪ್ರಕರಣ ಸಂಬಂಧ ಪ್ರತಿಕ್ರಿಯೆಯನ್ನು ದಾಖಲಿಸಲು ಸಮಯ ಬೇಕಾಗಿದೆ ಎಂದು ಈ ಇಬ್ಬರ ಪರ ಹಾಜರಿದ್ದ ವಕೀಲರ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಈ ಇಬ್ಬರ ವಿರುದ್ಧವು ದೇಶದ್ರೋಹ ಮತ್ತು ಇತರೆ ಆರೋಪಗಳಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT