ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ರೈಲ್ವೆ ಹಳಿ ಜಲಾವೃತ; ಪ್ರವಾಹದಲ್ಲಿ ಸಿಲುಕಿದ ರೈಲು

Last Updated 21 ಜುಲೈ 2018, 13:34 IST
ಅಕ್ಷರ ಗಾತ್ರ

ಭುಬನೇಶ್ವರ್: ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವಮಳೆಯಿಂದಾಗಿ ಭೂಪ್ರದೇಶ ಜಲಾವೃತವಾಗಿವೆ. ರೈಲ್ವೆ ಹಳಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಭುಬನೇಶ್ವರ್- ಜಗದಲ್ಪುರ್ ಹೀರಾಖಂಡ್ ಎಕ್ಸ್‌ಪ್ರೆಸ್‌ ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ.

ರೈಲ್ವೆ ಹಳಿಯಲ್ಲಿ ರೈಲು ಸಿಲುಕಿಕೊಂಡಿರುವ ದೃಶ್ಯವನ್ನು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಈ ಘಟನೆ ನಂತರ ಜಗದಲ್‍ಪುರದಿಂದಭುಬನೇಶ್ವರ್ಹೋಗುವ ರೈಲು ಸ್ಥಗಿತಗೊಳಿಸಿ, ಕೋರಟ್‍ಪುರ್ ನಿಂದಭುಬನೇಶ್ವರ್ ವರೆಗೆ ಮಾತ್ರ ರೈಲು ಸಂಚಾರ ಕಲ್ಪಿಸಲಾಯಿತು.

ಒಡಿಶಾದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಲ್ಯಾಣಿ ನದಿ ತುಂಬಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT