ಲಖನೌ: ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಕಳ್ಳತನವಾದ ಕಾರಣ ಸುಮಾರು ಒಂದು ತಿಂಗಳಿಂದ ವಿದ್ಯುತ್ ಪೂರೈಕೆ ಇಲ್ಲದೇ ಉತ್ತರ ಪ್ರದೇಶದ ಸೊರಹಾ ಗ್ರಾಮದ ಜನರು ಕತ್ತಲಲ್ಲಿಯೇ ಬದುಕು ನಡೆಸುತ್ತಿದ್ದಾರೆ.

250ಕೆವಿಎ ವಿದ್ಯುತ್ ಪರಿವರ್ತಕವನ್ನು ಹಾಳು ಮಾಡಿ, ಅದರಲ್ಲಿದ್ದ ತೈಲ ಸೇರಿದಂತೆ ಇನ್ನಿತರೆ ಘಟಕಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಇನ್ನೊಂದೆಡೆ ವಿದ್ಯುತ್ ಇಲಾಖೆಯೂ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
.ಹವಾಮಾನ ದತ್ತಾಂಶ ಹಂಚಿಕೆ ಕಡ್ಡಾಯ: ಕೇಂದ್ರದ ಯೋಜನೆ.ರಾಷ್ಟ್ರಗಳು ಬಲವಂತದಿಂದ ಗಡಿ ವಿಸ್ತರಿಸುವಂತಿಲ್ಲ: ಟ್ರಂಪ್ ಹೇಳಿಕೆಗೆ ಜರ್ಮನಿ ಕಿಡಿ.
ಗ್ರಾಮದಲ್ಲಿ ಸುಮಾರು 5,000 ಜನರು ವಾಸಿಸುತ್ತಿದ್ದು, ಮುಸ್ಸಂಜೆಯಾಗುತ್ತಿದ್ದಂತೆಯೇ ನಾವೆಲ್ಲರೂ ಕಳದೆ 25 ದಿನಗಳಿಂದ ಕತ್ತಲೆಯಲ್ಲಿ ಜೀವನ ನಡೆಸುವಂತಾಗಿದೆ. ಫೆಬ್ರುವರಿಯಲ್ಲಿ ಪ್ರಾರಂಭವಾಗುವ ಪಿಯುಸಿ ಬೋರ್ಡ್ ಪರೀಕ್ಷೆಗಳಿಗೂ ಇಲ್ಲಿನ ವಿದ್ಯಾರ್ಥಿಗಳು ಓದುಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಇಲ್ಲಿನ ನಿವಾಸಿಗಳ ದೈನಂದಿನ ಜೀವನ ಅಸ್ಥವ್ಯಸ್ತವಾಗಿದೆ. ಮೊಬೈಲ್ ಚಾರ್ಜಿಂಗ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಹೊಸ ಟ್ರಾನ್ಸ್ಫಾರ್ಮರ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ಉಘೈಟಿ ವಿದ್ಯುತ್ ಸಬ್ಸ್ಟೇಷನ್ನ ಕಿರಿಯ ಎಂಜಿನಿಯರ್ ಅಶೋಕ್ ಕುಮಾರ್ ಭರವಸೆ ನೀಡಿದ್ದಾರೆ.
.ಪ್ರಿಯಾಂಕಾ ಕೆನ್ನೆಯಂತಹ ರಸ್ತೆ: BJP ನಾಯಕನ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು.VIDEO | ಅಸ್ಸಾಂ ಕಲ್ಲಿದ್ದಲು ಗಣಿಯಲ್ಲಿ ದುರಂತ, ರಕ್ಷಣಾ ಕಾರ್ಯಾಚರಣೆ.VIDEO | ಕೇರಳದ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಚ್ಚಿದ ಆನೆ: 23 ಜನರಿಗೆ ಗಾಯ.RSS ಮೇಲಿನ ಪ್ರೀತಿಗಾಗಿ ಪ್ರಣವ್ಗೆ ಕೇಂದ್ರದಿಂದ ಸ್ಮಾರಕ ಉಡುಗೊರೆ:ಡ್ಯಾನಿಶ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.