ಈರೋಡ್: ತಮಿಳುನಾಡಿನಲ್ಲಿ ₹ 666 ಕೋಟಿ ಮೌಲ್ಯದ 810 ಕೆ.ಜಿ ಚಿನ್ನದ ಆಭರಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಯಲ್ಲಿ ಮುಳುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಈರೋಡ್ ಸಮೀಪ ಚಿತ್ತೊಡ್ ಬಳಿ ಈ ಘಟನೆ ನಡೆದಿದೆ.

ಖಾಸಗಿ ಲಾಜಿಸ್ಟಿಕ್ ಕಂಪನಿಗೆ ಸೇರಿದ ಈ ವಾಹನ ಕೊಯಮತ್ತೂರಿನಿಂದ ಸೇಲಂಗೆ ಹೊಗುತ್ತಿತ್ತು. ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಕೆರೆಯಲ್ಲಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲಿನರ್ಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿನ್ನಾಭರಣಗಳಿಗೆ ಯಾವುದೇ ಹಾನಿಯಾಗಿಲ್ಲ. ಮುಳುಗಿರುವ ಟ್ರಕ್ನಿಂದ ಅವುಗಳನ್ನು ತೆಗೆದು ಬೇರೆ ವಾಹನದಲ್ಲಿ ಸಾಗಿಸಲಾಯಿತು. ಈ ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.