ವಾಷಿಂಗ್ಟನ್: 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಆಪ್ತ ವಕೀಲ, ಸಿಬ್ಬಂದಿ ವಿಭಾಗದ ಮಾಜಿ ಮುಖ್ಯಸ್ಥ ಮತ್ತು ಇತರ ಆರೋಪಿಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಷಮಾದಾನ ನೀಡಿದ್ದಾರೆ.

ವಕೀಲ ರೂಡಿ ಗಿಲಿಯಾನಿ, ಅಧಿಕಾರಿ ಮಾರ್ಕ್ ಮೀಡೋಸ್ ಮತ್ತು ಇತರ ಆರೋಪಿಗಳಿಗೆ ಸಂಪೂರ್ಣ ಮತ್ತು ಷರತ್ತುಬದ್ಧ ಕ್ಷಮಾದಾನ ನೀಡಿರುವ ಆದೇಶದ ಪ್ರತಿಯನ್ನು ಅಮೆರಿಕದ ಕ್ಷಮಾದಾನ ಅಟಾರ್ನಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಕರಣದ ಆರೋಪಿಯಾಗಿರುವ ಟ್ರಂಪ್ ಅವರಿಗೆ ಈ ಕ್ಷಮಾದಾನ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಟ್ರಂಪ್ ಕ್ಷಮಾಪಣೆಯು ಫೆಡರಲ್ ಅಪರಾಧಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವ ಆರೋಪಿಗಳ ವಿರುದ್ಧವೂ ಫೆಡರಲ್ ಪ್ರಕರಣಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.