ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ ಮಾಧ್ಯಮ ಸಮಾಜವನ್ನು ಒಡೆಯುತ್ತಿದೆ: ಸುಪ್ರೀಂ ಕೋರ್ಟ್‌

Last Updated 14 ಜನವರಿ 2023, 2:35 IST
ಅಕ್ಷರ ಗಾತ್ರ

ನವದೆಹಲಿ: ದ್ವೇಷ ಭಾಷಣ ಅಪಾಯಕಾರಿ. ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ದೇಶಕ್ಕೆ ಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ದೇಶದಾದ್ಯಂತ ದ್ವೇಷ ಭಾಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಮತ್ತು ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ, ‘ದ್ವೇಷ ಭಾಷಣ ಅಪಾಯಕಾರಿ, ಅದು ನಿಲ್ಲಲೇಬೇಕು’ ಎಂದು ಹೇಳಿತು.

‘ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳು ಟಿಆರ್‌ಪಿಗಾಗಿ ಪರಸ್ಪರ ಸ್ಪರ್ಧೆಗೆ ಇಳಿದು, ಸಮಾಜವನ್ನು ಇಬ್ಭಾಗ ಮಾಡುತ್ತಿವೆ. ದ್ವೇಷ ಭಾಷಣ ಬಿತ್ತುವ ಅಜೆಂಡಾಗಳಲ್ಲಿ ಟಿ.ವಿ ನಿರೂಪಕರೂ ಭಾಗಿಯಾಗಿರುವುದು ಅಚ್ಚರಿ ಉಂಟುಮಾಡಿದೆ’ ಎಂದಿತು.

ಮುದ್ರಣ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಗಳಿಗೆ ‘ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ’ ಏಕಿಲ್ಲ ಎಂದೂ ಪ್ರಶ್ನಿಸಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT