‘ಡಿಎಂಕೆಗೆ ಇದು ಕೊನೇ ಚುನಾವಣೆ’
‘ಡಿಎಂಕೆ ಪಕ್ಷವು ಇನ್ನೆಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಇದು ಅದರ ಕೊನೇ ಚುನಾವಣೆ. ಈ ಪಕ್ಷವು ಜನರ ವಿಶ್ವಾಸ ಕಳೆದುಕೊಂಡು ಅವರ ಆಕ್ರೋಶಕ್ಕೆ ಗುರಿಯಾಗಿದೆ’ ಎಂದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇ.ಕೆ. ಪಳನಿಸ್ವಾಮಿ ಹೇಳಿದರು. ‘ಸರ್ಕಾರಿ ಕೆಲಸಗಾರರು ಶಿಕ್ಷಕರು ರಕ್ಷಣಾ ಕಾರ್ಯಕರ್ತರು ನರ್ಸ್‌ಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡು ರಣರಂಗವಾಗಿ ಮಾರ್ಪಟ್ಟಿದೆ. 2021ರಲ್ಲಿ ತಾನು ನೀಡಿದ್ದ ಚುನಾವಣಾ ಭರವಸೆಗಳಲ್ಲಿ ನಾಲ್ಕನೇ ಒಂದು ಭಾಗದಷ್ಟನ್ನೂ ಡಿಎಂಕೆ ಈಡೇರಿಸಿಲ್ಲ’ ಎಂದು ದೂರಿದರು.