ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ: ಲಕ್ಷದ್ವೀಪದಿಂದ ಎರಡೂವರೆ ವರ್ಷದ ಮಗುವಿನ ಏರ್‌ಲಿಫ್ಟ್‌

Published 22 ಜೂನ್ 2023, 14:08 IST
Last Updated 22 ಜೂನ್ 2023, 14:08 IST
ಅಕ್ಷರ ಗಾತ್ರ

ಕೊಚ್ಚಿ: ಪ್ರತಿಕೂಲ ಹವಾಮಾನದ ನಡುವೆಯೂ ಉಸಿರಾಟದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಎರಡೂವರೆ ವರ್ಷದ ಮಗುವನ್ನು ಲಕ್ಷದ್ವೀಪದ ಅಗತ್ತಿ ದ್ವೀಪದಿಂದ ಕೊಚ್ಚಿಗೆ ಭಾರತೀಯ ನೌಕಾಪಡೆಯು  ಡಾರ್ನಿಯರ್‌ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಿದೆ. 

ಮಗು ಜ್ವರ, ನ್ಯೂಮೋನಿಯಾ ಮತ್ತು ಶ್ವಾಸಕೋಶದ ವೈಫಲ್ಯದಿಂದ ಬಳಲುತ್ತಿತ್ತು. ಮಗುವಿನ ತಾಯಿ, ಸಂಬಂಧಿ ಮತ್ತು ವೈದ್ಯರೊಂದಿಗೆ  ಕೊಚ್ಚಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುವನ್ನು ಐಸಿಯುವಿನಲ್ಲಿ ದಾಖಲಿಸಲಾಗಿದ್ದು, ಜೀವರಕ್ಷಕದ ನೆರವು ನೀಡಲಾಗಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. 

ಕೇಂದ್ರಾಡಳಿತ ಪ್ರದೇಶದ ಕೋರಿಕೆಯ ಮೇರೆಗೆ ಲಕ್ಷದ್ವೀಪದ ನೌಕಾ ಅಧಿಕಾರಿಯಿಂದ ವೈದ್ಯಕೀಯ ಸ್ಥಳಾಂತರಕ್ಕೆ ನೆರವು ಕೋರಿ ದಕ್ಷಿಣ ನೇವಲ್ ಕಮಾಂಡ್ (ಎಸ್‌ಎನ್‌ಸಿ) ಕೊಚ್ಚಿಯಲ್ಲಿ ತುರ್ತು ಫ್ಯಾಕ್ಸ್ ಸ್ವೀಕರಿಸಿದ ಬಳಿಕ, ನೌಕಾಪಡೆಯು ತಕ್ಷಣವೇ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT