ನವದೆಹಲಿ: ಅರುಣಾಚಲ ಪ್ರದೇಶದ ಇಬ್ಬರು ವ್ಯಕ್ತಿಗಳು ಕಳೆದ ಎರಡು ವರ್ಷಗಳಿಂದ ಕಣ್ಮರೆಯಾಗಿದ್ದಾರೆ. ಗಿಡಮೂಲಿಕೆ ಔಷಧ ಸಸ್ಯಗಳನ್ನು ಹುಡುಕೊಂಡು ಭಾರತ– ಚೀನಾ ಗಡಿಯ ದುರ್ಗಮ ಪ್ರದೇಶಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಇಬ್ಬರನ್ನು ಚೀನಿ ಸೇನೆ ಬಂಧಿಸಿ ವಶದಲ್ಲಿಟ್ಟುಕೊಂಡಿದೆ ಎಂದು ನಂಬಲಾಗಿದೆ. ಆದರೆ, ಚೀನಿ ಸೇನೆ ಇದನ್ನು ಈವರೆಗೆ ಒಪ್ಪಿಕೊಂಡಿಲ್ಲ. ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ.