ಜೈಪುರ: ಟ್ಯಾಂಕ್ಗೆ ಮದ್ದುಗುಂಡುಗಳನ್ನು ತುಂಬುವಾಗ ಸ್ಫೋಟ ಸಂಭವಿಸಿ, ಇಬ್ಬರು ಯೋಧರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬೀಕಾನೇರ್ನಲ್ಲಿ ಬುಧವಾರ ನಡೆದಿದೆ.

ಈ ವೇಳೆ, ಮತ್ತೊಬ್ಬ ಯೋಧ ಗಾಯಗೊಂಡಿರುವುದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ.

ಸ್ಫೋಟದ ವೇಳೆ, ಈ ಮೂವರೂ ಯೋಧರು ಬೀಕಾನೇರ್ನ ಮಹಾರಾಜ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಟ್ಯಾಂಕ್ನೊಂದಿಗೆ ಅಭ್ಯಾಸ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಮೃತ ಯೋಧರನ್ನು ಉತ್ತರ ಪ್ರದೇಶದ ದೇವರಿಯಾದ ಆಶುತೋಶ್ ಮಿಶ್ರಾ ಹಾಗೂ ರಾಜಸ್ಥಾನದ ದೌಸಾ ಜಿತೇಂದ್ರ ಎಂದು ಗುರುತಿಸಲಾಗಿದೆ. ಗಾಯಗೊಂಡ ಯೋಧನನ್ನು ಚಂಡೀಗಢದ ಆಸ್ಪತ್ರೆಗೆ ಹೆಲಿಕಾಪ್ಟರ್ನಲ್ಲಿ ಕರೆದೊಯ್ಯಲಾಗಿದೆ ಎಂದು ಲೂಣ್ಕರಣ್ಸರ್ ಸರ್ಕಲ್ ಆಫೀಸರ್ ನರೇಂದ್ರ ಕುಮಾರ್ ಪೂನಿಯಾ ಅವರು ತಿಳಿಸಿದ್ದಾರೆ.

ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಸೂರತ್ಗಢ ಸೇನಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.